ಬೆಂಗಳೂರು: ಬೇಸಿಗೆಯ ಸುಡುವ ಬಿಸಿಲಿನಲ್ಲಿ ಗರ್ಭಿಣಿಯರು ತಮ್ಮ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ದೇಹವನ್ನು ತಂಪಾಗಿರಿಸುವುದು ಮತ್ತು ಹೈಡ್ರೇಟೆಡ್ ಆಗಿರುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಗರ್ಬಿಣಿಯರು ಸೇವಿಸಬಹುದಾದ ಕೆಲವು ಉತ್ತಮ ಹಣ್ಣುಗಳು ಇಲ್ಲಿವೆ.
1. ಕಲ್ಲಂಗಡಿ ಹಣ್ಣು (Watermelon)
ಕಲ್ಲಂಗಡಿಯಲ್ಲಿ ನೀರಿನಂಶ ಅತಿ ಹೆಚ್ಚಾಗಿರುವುದರಿಂದ ಇದು ದೇಹವನ್ನು ಹೈಡ್ರೇಟೆಡ್ ಆಗಿಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಕಾಲುಗಳ ಸೆಳೆತವನ್ನು ಕಡಿಮೆ ಮಾಡಲು ಮತ್ತು ಎದೆಯುರಿಯನ್ನು ನಿಯಂತ್ರಿಸಲು ಸಹಕಾರಿ.
2. ಮಾವಿನ ಹಣ್ಣು (Mango)
ಮಾವಿನ ಹಣ್ಣಿನಲ್ಲಿ ವಿಟಮಿನ್ A ಮತ್ತು C ಸಮೃದ್ಧವಾಗಿದೆ. ಇದು ಮಗುವಿನ ರೋಗನಿರೋಧಕ ಶಕ್ತಿ ಮತ್ತು ದೃಷ್ಟಿಯ ಬೆಳವಣಿಗೆಗೆ ಪೂರಕ. ಆದರೆ, ಅತಿಯಾದ ಸೇವನೆ ಬೇಡ, ಮಿತವಾಗಿ ಸೇವಿಸಿ.
3. ಕಿತ್ತಳೆ ಮತ್ತು ನಿಂಬೆ ಹಣ್ಣು (Citrus Fruits)
ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ C ಅಧಿಕವಾಗಿರುತ್ತದೆ, ಇದು ಕಬ್ಬಿಣದಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಕಾಡುವ ವಾಕರಿಕೆ (Morning Sickness) ಕಡಿಮೆ ಮಾಡಲು ನಿಂಬೆ ಪಾನಕ ಅತ್ಯುತ್ತಮ.
4. ಸಪೋಟ (Sapota/Chiku)
ಸಪೋಟ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಮತ್ತು ಶಕ್ತಿ ಹೆಚ್ಚಾಗಿರುತ್ತದೆ. ಇದು ಗರ್ಭಿಣಿಯರಿಗೆ ಆಗಾಗ ಕಾಡುವ ಸುಸ್ತು ಮತ್ತು ನಿಶಕ್ತಿಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.
5. ಬಾಳೆಹಣ್ಣು (Banana)
ಇದು ವರ್ಷಪೂರ್ತಿ ಸಿಗುವ ಹಣ್ಣಾದರೂ ಬೇಸಿಗೆಯಲ್ಲಿ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಇದರಲ್ಲಿರುವ ಫೈಬರ್ ಮಲಬದ್ಧತೆಯನ್ನು ತಡೆಯುತ್ತದೆ.
6. ದ್ರಾಕ್ಷಿ (Grapes)
ದ್ರಾಕ್ಷಿಯಲ್ಲಿ ಫೋಲೇಟ್ ಮತ್ತು ವಿಟಮಿನ್ ಬಿ ಇದ್ದು, ಇದು ಗರ್ಭಸ್ಥ ಶಿಶುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ. ಆದರೆ ಇದನ್ನು ಚೆನ್ನಾಗಿ ತೊಳೆದು ಬಳಸಬೇಕು.
ಗಮನಿಸಬೇಕಾದ ಅಂಶಗಳು:
-
ಯಾವುದೇ ಹಣ್ಣನ್ನು ಸೇವಿಸುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆದು ಬಳಸಿ.
-
ರಸ್ತೆಯ ಬದಿಯಲ್ಲಿ ಕತ್ತರಿಸಿಟ್ಟ ಹಣ್ಣುಗಳಿಗಿಂತ, ಮನೆಯಲ್ಲೇ ತಾಜಾವಾಗಿ ಕತ್ತರಿಸಿದ ಹಣ್ಣುಗಳನ್ನು ತಿನ್ನಿ.
-
ನಿಮಗೆ ಮಧುಮೇಹ (Gestational Diabetes) ಇದ್ದರೆ, ಹಣ್ಣುಗಳನ್ನು ತಿನ್ನುವ ಮೊದಲು ನಿಮ್ಮ ವೈದ್ಯರ ಸಲಹೆ ಪಡೆಯುವುದು ಉತ್ತಮ.
