ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣ(Renukaswamy murder case) ದ ವಿಚಾರಣೆಯಲ್ಲಿ ಮತ್ತೊಂದು ತಿರುವು ಕಂಡಿದೆ. ಬೆಂಗಳೂರು 64ನೇ ಸಿಸಿಹೆಚ್ (ಸೆಷನ್ಸ್) ನ್ಯಾಯಾಲಯ ಇಂದು ಚಾರ್ಜ್ ಫ್ರೇಮ್ (ಆರೋಪ ನಿಗದಿ) ಪ್ರಕ್ರಿಯೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.
ಆರೋಪಿಗಳು ಇಂದು ಕೋರ್ಟ್ ಹಾಲ್‌ಗೆ ಹಾಜರಾಗಲು ಸಾಧ್ಯವಾಗದ ಹಿನ್ನೆಲೆ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ನಟ ದರ್ಶನ್(Darshan) , ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳಿದ್ದಾರೆ.
ಚಾರ್ಜ್ ಫ್ರೇಮ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಪ್ರಕರಣದ ಮುಖ್ಯ ವಿಚಾರಣೆ ಆರಂಭವಾಗಲಿದೆ ಎಂದು ನ್ಯಾಯಾಲಯ ಮೂಲಗಳು ತಿಳಿಸಿವೆ.
ಆದರೆ ಇವತ್ತೇ ಚಾರ್ಜ್ ಫ್ರೇಮ್ ಮಾಡುವಂತೆ ಆರೋಪಿಗಳ ವಕೀಲರು ನ್ಯಾಯಾಲಯದಲ್ಲಿ ಮನವಿ ಮಾಡಿದರು. ವಕೀಲರು ನ್ಯಾಯಮಂದಿರದ ಜಡ್ಜ್ ಚೇಂಬರ್ನಲ್ಲಿ ವಿಚಾರಣೆ ನಡೆಸುವಂತೆ, ಹಾಗೂ ಆರೋಪಿಗಳನ್ನು ಕೋರ್ಟ್ ಹಾಲ್‌ಗೆ ಕರೆತರಲು ಪ್ರಯತ್ನ ಮಾಡಲಾಗುವುದು ಎಂಬ ಮನವಿಯನ್ನೂ ಸಲ್ಲಿಸಿದರು.
ನ್ಯಾಯಾಧೀಶರು ವಕೀಲರ ಮನವೆಗೆ ಸ್ಪಂದಿಸಿ, ಚಾರ್ಜ್ ಫ್ರೇಮಿಂಗ್ ಮುಂದಿನ ವಿಚಾರಣೆಗೆ ನಿರ್ಧಾರ ಕೈಗೊಂಡರು. ಜೊತೆಗೆ, ಆರೋಪಿಗಳನ್ನು ಕಟಕಟೆಗೆ ಕೋರ್ಟ್ ಹಾಲ್‌ಗೆ ಕರೆತರುವಂತೆ ಸೂಚನೆ ನೀಡಿದರು
