S Shorts

ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ್ದ 4 ತಿಂಗಳ ಗರ್ಭಿಣಿ Nurse ಸಾ*ವು; ಕೌಟುಂಬಿಕ ಕಲಹ ಶಂಕೆ!

ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ್ದ 4 ತಿಂಗಳ ಗರ್ಭಿಣಿ Nurse ಸಾ*ವು; ಕೌಟುಂಬಿಕ ಕಲಹ ಶಂಕೆ!
Author: Sagaradventure
Posted By: Sagaradventure
Updated: Apr 1, 2026 | 1:49 PM

ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ್ದ 4 ತಿಂಗಳ ಗರ್ಭಿಣಿ Nurse ಸಾ*ವು; ಕೌಟುಂಬಿಕ ಕಲಹ ಶಂಕೆ!

​ಸೊರಬ(ಶಿವಮೊಗ್ಗ): ತಾಲೂಕಿನ ಉಳವಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹ*ತ್ಯೆಗೆ ಯತ್ನಿಸಿದ್ದ ಡಯಾಗ್ನೋಸ್ಟಿಕ್ ಕೇಂದ್ರದ ಸ್ಟಾಫ್ ನರ್ಸ್, ನಾಲ್ಕು ತಿಂಗಳ ಗರ್ಭಿಣಿ ಶ್ವೇತಾ (30) ಅವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಮೃ*ತಪಟ್ಟಿರುವ ದಾರುಣ ಘಟನೆ ನಡೆದಿದೆ.

ಶೇ. 90ರಷ್ಟು ಸುಟ್ಟ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ (KMC) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದಿನಗಳ ಕಾಲದ ಜೀವನ್ಮರಣ ಹೋರಾಟದ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

​ಸೊರಬ ತಾಲೂಕಿನ ಉಳವಿ ಗ್ರಾಮದ ನಿವಾಸಿಯಾಗಿದ್ದ ಶ್ವೇತಾ ಅವರು, ಅದೇ ಊರಿನ ನವೀನ್ ಎಂಬುವವರ ಜೊತೆ ಕಳೆದ ಏಳು ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಹೆಣ್ಣು ಮಗುವಿದ್ದು, ಶ್ವೇತಾ ಪ್ರಸ್ತುತ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂಬ ವಿಚಾರ ಮತ್ತಷ್ಟು ಕರುಳು ಹಿಂಡುವಂತಿದೆ.

ಅತ್ತೆ ಮನೆಯ ಹಿಂಭಾಗದಲ್ಲೇ ಈ ದಂಪತಿ ಪ್ರತ್ಯೇಕವಾಗಿ ವಾಸವಿದ್ದರು. ಕುಟುಂಬದಲ್ಲಿ ಉಂಟಾದ ಯಾವುದೋ ಕೌಟುಂಬಿಕ ಸಮಸ್ಯೆ ಅಥವಾ ಮನಸ್ತಾಪದಿಂದಾಗಿ ಬೇಸತ್ತು ಶ್ವೇತಾ ಅವರು ಈ ಕಠಿಣ ನಿರ್ಧಾರಕ್ಕೆ ಬಂದಿರಬಹುದು ಎಂದು ಪ್ರಾಥಮಿಕ ವರದಿಗಳಿಂದ ಶಂಕಿಸಲಾಗಿದೆ.

​ಕಳೆದ ಮಾರ್ಚ್ 29 ರಂದು ಪತಿಯ ಮನೆಯಲ್ಲಿಯೇ ಶ್ವೇತಾ ಅವರು ಏಕಾಏಕಿ ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ತಕ್ಷಣವೇ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಬೆಂಕಿಯ ತೀವ್ರತೆಗೆ ಅವರ ದೇಹ ಬಹುಪಾಲು ಸುಟ್ಟುಹೋಗಿತ್ತು. ಇದೀಗ ತಾಯಿಯ ಸಾವಿನಿಂದ ಮುಗ್ಧ ಹೆಣ್ಣು ಮಗು ಅನಾಥವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.