S Shorts

SCAM ALERT:ಸೋಲೋ ಟ್ರಿಪ್ ಹೋಗುವವರೇ ಟಾರ್ಗೆಟ್! ಪ್ರವಾಸಿಗರನ್ನು ನಂಬಿಸಿ ವಂಚಿಸುತ್ತಿದೆ ‘ಸಾಯಿ ದೀಪಕ್’ ಜಾಲ!

SCAM ALERT:ಸೋಲೋ ಟ್ರಿಪ್ ಹೋಗುವವರೇ ಟಾರ್ಗೆಟ್! ಪ್ರವಾಸಿಗರನ್ನು ನಂಬಿಸಿ ವಂಚಿಸುತ್ತಿದೆ ‘ಸಾಯಿ ದೀಪಕ್’ ಜಾಲ!
Author: Savina Naik
Posted By: Savina Naik
Updated: Apr 22, 2026 | 1:00 PM

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೋಲೋ ಟ್ರಿಪ್ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸದ ವೇಳೆ ಅಪರಿಚಿತರು ಫ್ರೆಂಡ್ಲಿ ಆಗಿ ಮಾತನಾಡಿಸಿದರೆ ಅತಿ ಸುಲಭವಾಗಿ ನಂಬಿಬಿಡುತ್ತೇವೆ ಇದನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್‌ ಸ್ನೇಹದ ಸೋಗಿನಲ್ಲಿ  ಲಕ್ಷಾಂತರ ರೂಪಾಯಿ ಹಣ ಹಾಗೂ ನಂಬಿಕೆಗೆ ದ್ರೋಹ ಮಾಡುತ್ತಿರುವ ಚಿತ್ತೂರು ಮೂಲದ ಸಾಯಿ ದೀಪಕ್ (Sai Deepak) ಎಂಬುವವನ ವಂಚನೆಯ ಜಾಲ ಈಗ ಬಯಲಿಗೆ ಬಂದಿದೆ.

ಚಿತ್ತೂರು ಮೂಲದ ಸಾಯಿ ದೀಪಕ್ , ಪ್ರವಾಸಿ ತಾಣಗಳಲ್ಲಿ ಒಬ್ಬರೇ ಇರುವ ಪ್ರವಾಸಿಗರನ್ನು (Solo Travelers) ಗುರುತಿಸಿ ಅವರ ಬಳಿ ಸ್ನೇಹ ಬೆಳೆಸುತ್ತಾನೆ. ಸಂದರ್ಭಕ್ಕೆ ತಕ್ಕಂತೆ ಹೆಲ್ಪ್‌ಫುಲ್ ಗೈಡ್ ಅಥವಾ ಪ್ರೊಫೆಷನಲ್ ಕನ್ಸಲ್ಟೆಂಟ್ ಎಂದು ತನ್ನನ್ನು ಪರಿಚಯಿಸಿಕೊಳ್ಳುವ ಈತ,  ನಂಬಿಕೆ ಗಳಿಸಿದ ಕೆಲವೇ ದಿನಗಳಲ್ಲಿ ಯಾವುದೋ ತುರ್ತು ಪರಿಸ್ಥಿತಿಯ ನೆಪವೊಡ್ಡಿ ಹಣ ಪಡೆದು ಪರಾರಿಯಾಗುವುದು ಈತ ಪರಾರಿಯಾಗುತ್ತಾನೆ.

ಗೋಕರ್ಣದ ಜೋಸ್ಟೆಲ್ (Zostel), ಕಾಸೋಲ್, ಕೊಚ್ಚಿ, ಮಂಗಳೂರು, ಗುವಾಹಟಿ, ದೆಹಲಿ, ಮನಾಲಿ ಮತ್ತು ರಿಷಿಕೇಶ ಸೇರಿದಂತೆ ದೇಶದ ಹಲವು ಕಡೆ ಈತ ಕೈಚಳಕ ತೋರಿಸಿದ್ದಾನೆ. ಕೇವಲ ಹಣ ಪಡೆಯುವುದು ಮಾತ್ರವಲ್ಲದೆ, ಸಂತ್ರಸ್ತರ ಬ್ಯಾಂಕ್ ವಿವರಗಳನ್ನು ಪಡೆದು ಅವರ ಖಾತೆಯನ್ನೇ ಇತರರಿಗೆ ವಂಚಿಸಲು ಬಳಸಿಕೊಳ್ಳುತ್ತಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈತ ನಕಲಿ ಡ್ರೈವಿಂಗ್ ಲೈಸೆನ್ಸ್ ಹಾಗೂ ಪ್ಯಾನ್ ಕಾರ್ಡ್‌ಗಳನ್ನು ಬಳಸಿ ವಾಹನಗಳನ್ನು ಬಾಡಿಗೆಗೆ ಪಡೆದು ನಾಪತ್ತೆಯಾಗುತ್ತಿದ್ದಾನೆ.

ಸಂತ್ರಸ್ತರ ಅಳಲು:

  1. ಗುವಾಹಟಿಯ ಶಿವಂ ಪಾಂಡೆ ಬಳಿ ಬೈಕ್ ಬಾಡಿಗೆಗೆ ಪಡೆದ ದೀಪಕ್, ಜಿಪಿಎಸ್ ಯಂತ್ರವನ್ನು ಕಿತ್ತೆಸೆದು ಪರಾರಿಯಾಗಿದ್ದ. ಬಳಿಕ ಸಿಕ್ಕಿಬಿದ್ದಾಗ ಹಣ ಕೊಡುವುದಾಗಿ ಬರೆದುಕೊಟ್ಟು ಮತ್ತೆ ಅಲ್ಲಿಂದಲೂ ಪರಾರಿಯಾಗಿದ್ದಾನೆ.

  2. ಮಂಗಳೂರಿನ ಭಾವನಾ (ಹೆಸರು ಬದಲಾಯಿಸಲಾಗಿದೆ) ಗೋಕರ್ಣದಲ್ಲಿ ಪರಿಚಯವಾದ ದೀಪಕ್, ಭಾವನಾ ಅವರ ಎಟಿಎಂ ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ಪಡೆದುಕೊಂಡು ಅವರ ಖಾತೆಯ ಮೂಲಕ ಇತರರಿಗೆ ವಂಚನೆ ಮಾಡಿದ್ದಾನೆ. ಭಾವನಾ ಅವರಿಂದಲೂ ಸಾವಿರಾರು ರೂಪಾಯಿ ಹಣ ಪಡೆದು ನಂಬಿಕೆ ದ್ರೋಹ ಮಾಡಿದ್ದಾನೆ. ಇದು ಒಬ್ಬರ ಕಥೆಯಲ್ಲ ಹೀಗೆ ಹಲವಾರು ಮಂದಿಗೆ ವಂಚಿಸಿದ್ದಾನೆ

ಈಗಾಗಲೇ ಈತನ ವಿರುದ್ಧ ಹಲವೆಡೆ ಎಫ್‌ಐಆರ್ (FIR) ದಾಖಲಾಗಿದೆ. ಆದರೂ ಈತ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದು, ಹೊಸ ಬಲಿಪಶುಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾನೆ. ಸಂತ್ರಸ್ತರು ಜಂಟಿಯಾಗಿ @APPOLICE100, @DGPAssamPolice ಗೆ ಟ್ಯಾಗ್ ಮಾಡುವ ಮೂಲಕ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಅಲ್ಲದೆ, ಪ್ರಮುಖ ಹಾಸ್ಟೆಲ್ ಸರಪಳಿಗಳಾದ @thehosteller ಮತ್ತು @ZostelHostel ಈತನನ್ನು ಬ್ಯಾನ್ ಮಾಡಬೇಕೆಂದು ಆಗ್ರಹಿಸಲಾಗಿದೆ.

ಒಂದು ವೇಳೆ ನೀವು ಈ ವ್ಯಕ್ತಿಯಿಂದ ವಂಚನೆಗೆ ಒಳಗಾಗಿದ್ದರೆ ಅಥವಾ ಈತನನ್ನು ಎಲ್ಲಾದರೂ ಕಂಡರೆ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ. ಸೋಲೋ ಟ್ರಿಪ್ ಹೋಗುವಾಗ ಅಪರಿಚಿತರಿಗೆ ನಿಮ್ಮ ಬ್ಯಾಂಕ್ ವಿವರ ಅಥವಾ ಎಟಿಎಂ ಕಾರ್ಡ್‌ಗಳನ್ನು ಯಾವುದೇ ಕಾರಣಕ್ಕೂ ನೀಡಬೇಡಿ. ನಿಮ್ಮ ಒಂದು ಶೇರ್ ಮತ್ತೊಬ್ಬರು ವಂಚನೆಗೆ ಒಳಗಾಗುವುದನ್ನು ತಪ್ಪಿಸಬಹುದು.