S Shorts

ಗ್ಯಾರಂಟಿ ಭಾಗ್ಯಗಳ ನಡುವೆಯೂ ಕಾಂಗ್ರೆಸ್‌ಗೆ ಮುಖಭಂಗ: 5 ಪುರಸಭೆಗಳಲ್ಲೂ BJPಗೆ ಭರ್ಜರಿ ಗೆಲುವು.!

ಗ್ಯಾರಂಟಿ ಭಾಗ್ಯಗಳ ನಡುವೆಯೂ ಕಾಂಗ್ರೆಸ್‌ಗೆ ಮುಖಭಂಗ: 5 ಪುರಸಭೆಗಳಲ್ಲೂ BJPಗೆ ಭರ್ಜರಿ ಗೆಲುವು.!
Author: Meghana Gowda
Posted By: Meghana Gowda
Updated: Dec 26, 2025 | 4:49 AM

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳ ಭರ್ಜರಿ ಪ್ರಚಾರದ ನಡುವೆಯೂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (Elections)ಮತದಾರರು ಶಾಕ್ ನೀಡಿದ್ದಾರೆ. ಸಿಎಂ ಕುರ್ಚಿ ಪಡೆಯುವ ಪೈಪೋಟಿ ಮತ್ತು ನಾಯಕತ್ವದ ಗೊಂದಲದ ನಡುವೆ ಕಾಂಗ್ರೆಸ್ ಪಟ್ಟಣ ಪಂಚಾಯತ್ ಮತ್ತು ಪುರಸಭೆ ಚುನಾವಣೆಗಳಲ್ಲಿ ಮುಖಭಂಗ ಅನುಭವಿಸಿದೆ.

ಐದು ಪುರಸಭೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದ ಫಲಿತಾಂಶ ಸರ್ಕಾರಕ್ಕೆ ನಡುಕ ಹುಟ್ಟಿಸಿದೆ. ಬಹುತೇಕ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ (BJP) ಭರ್ಜರಿ ಜಯ ಸಾಧಿಸುವ ಮೂಲಕ ಮತದಾರರ ವಿಶ್ವಾಸ ಗಳಿಸಿದೆ .

 ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ನಿರಂತರ ನಾಯಕತ್ವದ ಫೈಟ್ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಹಾಗೂ  ಗ್ಯಾರಂಟಿ ಯೋಜನೆಗಳ ಜಾರಿ ನಡುವೆ ಅಭಿವೃದ್ಧಿ ಕಾಮಗಾರಿಗಳನ್ನು ಮರೆತ ಪರಿಣಾಮವೇ ಈ ಸೋಲು ಎಂದು ವಿಪಕ್ಷಗಳು ಟೀಕಿಸುತ್ತಿವೆ.