S Shorts

Backward classes survey :ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮುಕ್ತಾಯ

Backward classes survey :ರಾಜ್ಯಾದ್ಯಂತ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ಮುಕ್ತಾಯ
Author: Meghana Gowda
Posted By: Meghana Gowda
Updated: Nov 1, 2025 | 7:14 AM

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯಾದ್ಯಂತ ನಡೆದ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ (backward classes survey)ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 31ರವರೆಗೆ ಈ ಸಮೀಕ್ಷೆ ನಡೆಸಲಾಯಿತು.

ಆಯೋಗದ ಮಾಹಿತಿಯ ಪ್ರಕಾರ ಒಟ್ಟಾರೆ 6,13,83,908 ಜನರ ಸಮೀಕ್ಷೆ ಪೂರ್ಣಗೊಂಡಿದೆ. ಈ ಬಾರಿ 6,85,38,000 ಜನರನ್ನು ಒಳಗೊಳ್ಳುವ ನಿರೀಕ್ಷೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದರು.

ಸಮೀಕ್ಷೆ ಸಮಯದಲ್ಲಿ 4,22,258 ಮನೆಗಳು ಸಮೀಕ್ಷೆಗೆ ನಿರಾಕರಿಸಿದರೆ, ಉಳಿದ 34,49,681 ಮನೆಗಳು ಖಾಲಿ ಅಥವಾ ಲಾಕ್ ಆಗಿದ್ದವು ಎಂದು ತಿಳಿದುಬಂದಿದೆ.

ಇನ್ನು ಸಮೀಕ್ಷೆಯಲ್ಲಿ ಭಾಗಿಯಾಗದವರು ಆನ್ಲೈನ್ ಮೂಲಕ ತಮ್ಮ ಮಾಹಿತಿಯನ್ನು ನೀಡಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 10ರವರೆಗೆ ಆನ್ಲೈನ್ ಸಮೀಕ್ಷೆಯಲ್ಲಿ ಭಾಗವಹಿಸಬಹುದು ಎಂದು ಆಯೋಗದ ಪ್ರಕಟಣೆ ತಿಳಿಸಿದೆ.