S Shorts

ಅಮಾನತುಗೊಂಡ Police Inspector ವಿರುದ್ಧ ಅತ್ಯಾ*ಚಾರ ಕೇಸ್: ಖಾಸಗಿ ಶಾಲಾ ಮುಖ್ಯ ಶಿಕ್ಷಕಿಗೆ 5 ವರ್ಷಗಳ ಕಾಲ ಲೈಂ*ಗಿಕ ದೌರ್ಜನ್ಯ, ಹಣ ವಸೂಲಿ!

ಅಮಾನತುಗೊಂಡ Police Inspector ವಿರುದ್ಧ ಅತ್ಯಾ*ಚಾರ ಕೇಸ್: ಖಾಸಗಿ ಶಾಲಾ ಮುಖ್ಯ ಶಿಕ್ಷಕಿಗೆ 5 ವರ್ಷಗಳ ಕಾಲ ಲೈಂ*ಗಿಕ ದೌರ್ಜನ್ಯ, ಹಣ ವಸೂಲಿ!
Author: Sagaradventure
Posted By: Sagaradventure
Updated: Mar 22, 2026 | 3:10 PM

ಬೆಳ್ತಂಗಡಿ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಅಮಾನತುಗೊಂಡಿದ್ದ ಮೂಡಬಿದಿರೆಯ ಮಾಜಿ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಇದೀಗ ಗಂಭೀರವಾದ ಅತ್ಯಾ*ಚಾರ ಹಾಗೂ ಹಣ ವಸೂಲಿ ಆರೋಪ ಕೇಳಿಬಂದಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಖಾಸಗಿ ಶಾಲೆಯೊಂದರ ಮುಖ್ಯ ಶಿಕ್ಷಕಿಯೊಬ್ಬರ ಮೇಲೆ ನಿರಂತರವಾಗಿ ಲೈಂ*ಗಿಕ ದೌರ್ಜನ್ಯ ಎಸಗಿದ ಆರೋಪದಡಿ ವೇಣೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರುದಾರ ಮಹಿಳೆಯು 2018 ರಿಂದ 2023 ರ ನಡುವಿನ 5 ವರ್ಷಗಳ ಸುದೀರ್ಘ ಅವಧಿಯಲ್ಲಿ ಲೈಂ*ಗಿಕ ಕಿರುಕುಳ ಅನುಭವಿಸಿರುವುದಾಗಿ ದೂರಿನಲ್ಲಿ ವಿವರಿಸಿದ್ದಾರೆ. ಆರೋಪಿ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಅವರು ಸಂತ್ರಸ್ತೆಯ ಮನೆಗೆ ಬಂದು ಆಕೆಯ ಮೇಲೆ ಬಲವಂತವಾಗಿ ಅತ್ಯಾ*ಚಾರ ಎಸಗುತ್ತಿದ್ದರು. ಕೇವಲ ಲೈಂ*ಗಿಕ ದೌರ್ಜನ್ಯ ಮಾತ್ರವಲ್ಲದೆ, ಆರೋಪಿಯು ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿ ಹಣ ವಸೂಲಿ (Extortion) ಕೂಡ ಮಾಡಿದ್ದಾರೆ ಎಂಬ ಆಘಾತಕಾರಿ ವಿಚಾರ ದೂರಿನಿಂದ ಬಹಿರಂಗವಾಗಿದೆ.

ನಿರಂತರ ಕಿರುಕುಳದಿಂದ ಬೇಸತ್ತ ಸಂತ್ರಸ್ತ ಮಹಿಳೆಯು ಮಾರ್ಚ್ 21 ರಂದು ಸಂಜೆ ವೇಣೂರು ಪೊಲೀಸ್ ಠಾಣೆಗೆ ತೆರಳಿ ಅಧಿಕೃತವಾಗಿ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಕಾರ್ಯಪ್ರವೃತ್ತರಾದ ವೇಣೂರು ಪೊಲೀಸರು, ಆರೋಪಿ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಸೆಕ್ಷನ್ 376(2)(a)(1), 376(2)(n), 384 ಹಾಗೂ 506 ರ ಅಡಿಯಲ್ಲಿ ಗಂಭೀರ ಸ್ವರೂಪದ ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ಕೈಗೊಂಡಿದ್ದಾರೆ.