ಜೈಪುರ: ಸಾವು ಬಂದ ಮೇಲೆ ಮಕ್ಕಳು ಅಥವಾ ಆಪ್ತರು ಅಂತ್ಯಕ್ರಿಯೆ ಮಾಡುವುದು ಲೋಕರೂಢಿ. ಆದರೆ ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬರು ತಾವು ಬದುಕಿರುವಾಗಲೇ ತಮಗೆ ತಾವೇ ‘ಪಿಂಡದಾನ’ ಮತ್ತು ‘ಶ್ರಾದ್ಧ’ ಮಾಡಿ ಊರಿನ 1900 ಜನರಿಗೆ ಭೋಜನ ಏರ್ಪಡಿಸಿ ಗಮನ ಸೆಳೆದಿದ್ದಾರೆ.
ಉತ್ತರ ಪ್ರದೇಶದ ಅವೌರಿಯಾದಲ್ಲಿ ಇಲ್ಲಿನ ನಿವಾಸಿಯಾಗಿರುವ 65 ವರ್ಷದ ರಾಕೇಶ್ ಯಾದವ್ ಎಂಬುವವರೇ ಹೀಗೆ ತಾವು ಜೀವಂತವಾಗಿರುವಾಗಲೇ ತಮ್ಮದೇ ತಿಥಿ ಮಾಡಿಸಿ ಇಡೀ ಊರಿಗೆ ಊಟ ಹಾಕಿಸಿದವರು. ಸಾವಿಗೂ ಮೊದಲು ಇವರು ಆಯೋಜಿಸಿದ ಈ ತಿಥಿ ಕಾರ್ಯಕ್ರಮದಲ್ಲಿ 1,900 ಜನರು ಭಾಗವಹಿಸಿದ್ದಾರೆ. ಇದಕ್ಕಾಗಿ ಅವರು ಶ್ರದ್ಧಾದ ಆಹ್ವಾನ ಪತ್ರಿಕೆಯನ್ನು ಮುದ್ರಿಸಿದ್ದಾರೆ. ನನಗೆ ಜೀವಂತವಾಗಿರುವಾಗಲೇ ನನ್ನ ತಿಥಿ ಊಟ ಹಾಕಿಸುವ ಅವಕಾಶ ಸಿಕ್ಕಿದೆ. ನನಗೆ ಯಾರೂ ಇಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಜನರು ಸಹಜ ಎಂಬಂತೆ ಆಗಮಿಸಿದ್ದು, ಅವರ ತಿಥಿ ಕಾರ್ಯಗಳಲ್ಲಿ ಭಾಗವಹಿಸಿ ಭರ್ಜರಿ ಭೋಜನ ಸೇವಿಸಿದ್ದಾರೆ.
ರಾಕೇಶ್ ಅವರು ಅವಿವಾಹಿತರಾಗಿದ್ದು, ಮರಣದ ನಂತರ ಮಕ್ಕಳು ಮಾಡುವ ಕಾರ್ಯಗಳನ್ನು ಈ ವ್ಯಕ್ತಿ ತಾವೇ ಮಾಡಿಕೊಳ್ಳಲು ನಿರ್ಧರಿಸಿದರು. ನನ್ನ ಸಾವಿನ ನಂತರ ನನಗೆ ಅಂತ್ಯಕ್ರಿಯೆ ನಡೆಸಲು ಯಾರೊಬ್ಬರೂ ಇಲ್ಲ ಹೀಗಾಗಿ ಜೀವಂತವಾಗಿರುವಾಗಲೇ ನಾನು ಇದನ್ನು ಮಾಡಿದ್ದೇನೆ ಎಂದು ಹೇಳಿದ್ದಾರೆ. ಯಾಕೆ ನೀವು ಮದುವೆಯಾಗಿಲ್ಲ ಎಂದು ಕೇಳಿದ ಪ್ರಶ್ನೆಗ ಪ್ರತಿಕ್ರಿಯಿಸಿದ ಅವರು ನನಗೆ ಭೂಮಿ ಇರಲಿಲ್ಲ, ಭೂಮಿ ಇಲ್ಲದವರಿಗೆ ಹೆಣ್ಣು ಯಾರೂ ಕೊಡುತ್ತಾರೆ ನಾನು ಹೇಗೆ ಮದುವೆಯಾಗುವುದಕ್ಕೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ನನ್ನ ಸಾವಿನ ನಂತರ ನನಗಾಗಿ ಕಣ್ಣೀರು ಹಾಕುವವರು ಅಥವಾ ಧಾರ್ಮಿಕ ವಿಧಿಗಳನ್ನು ಪೂರೈಸುವವರು ಯಾರೂ ಇಲ್ಲ. ನಾನು ಹೋದ ಮೇಲೆ ಆತ್ಮಕ್ಕೆ ಶಾಂತಿ ಸಿಗಬೇಕೆಂಬ ಆಶಯದಿಂದ ನಾನೇ ಈ ನಿರ್ಧಾರ ಮಾಡಿದ್ದೇನೆ” ಎಂದು ಅವರು ಕಣ್ಣೀರು ತುಂಬಿದ ಕಣ್ಣುಗಳಿಂದ ಹೇಳಿದ್ದಾರೆ.
ಈ ಘಟನೆಯು ಇಂದಿನ ಸಮಾಜದಲ್ಲಿ ವೃದ್ಧರ ಏಕಾಂಗಿತನ ಮತ್ತು ಮಕ್ಕಳಿಲ್ಲದ ದಂಪತಿಗಳು ಅನುಭವಿಸುವ ಮಾನಸಿಕ ಯಾತನೆಯನ್ನು ಎತ್ತಿ ತೋರಿಸುತ್ತದೆ. ಈ ವೃದ್ಧರ ಈ ಕಾರ್ಯ ಕಂಡು ಗ್ರಾಮಸ್ಥರು ಕೂಡ ಮರುಗಿದ್ದಾರೆ.
ಗಮನಿಸಿ: ಇದು ಕೇವಲ ಒಂದು ಸುದ್ದಿಯಲ್ಲ, ಒಂಟಿತನವು ಮನುಷ್ಯನನ್ನು ಎಂತಹ ನಿರ್ಧಾರಗಳಿಗೆ ತಳ್ಳುತ್ತದೆ ಎಂಬುದಕ್ಕೆ ಉದಾಹರಣೆ.
