ಬೆಂಗಳೂರು : 2025-26ನೇ ಸಾಲಿನ SSLC ಫಲಿತಾಂಶವನ್ನು ಪ್ರಕಟವಾಗಿದ್ದು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಶೇ.94.10 ಫಲಿತಾಂಶ ಬಂದಿದೆ
ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾತನಾಡಿ, ಈ ಬಾರಿಯ ಫಲಿತಾಂಶವು ದಾಖಲೆ ಮಟ್ಟದ ಪ್ರಗತಿ ಕಂಡಿರುವುದರಿಂದ, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೂರನೇ ಬಾರಿಯ ಪರೀಕ್ಷೆ ಇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಎರಡನೇ ಪರೀಕ್ಷೆಯು ಮೇ 18 ರಿಂದ ಮೇ 25ರವರೆಗೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರು ಪಾಸ್ ಆಗಲು ಪ್ರಯತ್ನಿಸಬಹುದು. ಇದಕ್ಕಾಗಿ ಶಿಕ್ಷಕರು ಮತ್ತು ಇಲಾಖೆಯು ಸೂಕ್ತ ತರಬೇತಿ ನೀಡಲಿದೆ.
ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಉಡುಪಿ ದ್ವಿತೀಯ ಹಾಗೂ ಉತ್ತರ ಕನ್ನಡ ಜಿಲ್ಲೆ ತೃತೀಯ ಸ್ಥಾನದಲ್ಲಿವೆ.ಇನ್ನೂ ಬಾರಿ ಉತ್ತೀರ್ಣ ಅಂಕ 33ಕ್ಕೆ ಇಳಿಸಲಾಗಿತ್ತಾದ್ರೂ, 7 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. 21 ವಿದ್ಯಾರ್ಥಿಗಳು 624 ಅಂಕ, 28 ವಿದ್ಯಾರ್ಥಿಗಳು 623 ಅಂಕ, 74 ವಿದ್ಯಾರ್ಥಿಗಳು 622 ಅಂಕ, 98 ವಿದ್ಯಾರ್ಥಿಗಳು 621 ಅಂಕ ಹಾಗೂ 150 ವಿದ್ಯಾರ್ಥಿಗಳು 620 ಅಂಕಗಳನ್ನ ಪಡೆದುಕೊಂದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
