S Shorts

ಓವರ್‌ ಡೋಸ್‌ ಡ್ರಗ್‌ನಿಂದ ಇಬ್ಬರು MBA ವಿದ್ಯಾರ್ಥಿಗಳು ಸಾವು

ಓವರ್‌ ಡೋಸ್‌ ಡ್ರಗ್‌ನಿಂದ ಇಬ್ಬರು MBA ವಿದ್ಯಾರ್ಥಿಗಳು ಸಾವು
Author: Savina Naik
Posted By: Savina Naik
Updated: Apr 14, 2026 | 3:23 PM

ಮುಂಬೈ:  ಮ್ಯೂಸಿಕ್‌ ಪಾರ್ಟಿಯೊಂದರಲ್ಲಿ ಭಾಗವಹಿಸಿದ್ದ ಇಬ್ಬರು ಎಂಬಿಎ ವಿದ್ಯಾರ್ಥಿಗಳು ಡ್ರಗ್‌ ಓವರ್‌ ಡೋಸ್‌ನಿಂದ  ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಏಪ್ರಿಲ್‌ 11 ರ ರಾತ್ರಿ ಗೋರೆಗಾಂವ್‌ನ ನೆಸ್ಕೋ ಕೇಂದ್ರದಲ್ಲಿ ನಡೆದ ಮ್ಯೂಸಿಕ್‌ ಪಾರ್ಟಿಯಲ್ಲಿ ಸುಮಾರು 4,000 ಜನರು 2,000 ರೂ. ಪ್ರವೇಶ ಶುಲ್ಕ ಪಾವತಿಸಿ ಭಾಗವಹಿಸಿದ್ದರು. ಕೆಲವರು ನಿಷೇಧಿತ MDMA ಡ್ರಗ್‌ ಸೇವನೆ ಮಾಡಿದ್ದಾರೆ. ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮೂವರು ವಿದ್ಯಾರ್ಥಿಗಳು ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು, ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.

24 ವರ್ಷದ ಯುವತಿ, 28 ವರ್ಷದ ಓರ್ವ ಯುವಕ ಸಾವನ್ನಪ್ಪಿದ್ದಾರೆ. 25 ವರ್ಷದ ಮತ್ತೊರ್ವ ಯುವತಿಯ ಸ್ಥಿತಿ ಗಂಭೀರವಾಗಿದೆ.ಡ್ರಗ್ಸ್‌ ಓವರ್‌ ಡೋಸ್‌ ಸಾವಿಗೆ ಕಾರಣ ಎಂದು ವೈದ್ಯರು ತಿಳಿಸಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿ, ತನಿಖೆ ನಡೆಸಿದ ಪೊಲೀಸರು, ಮೃತರಿಗೆ ಮಾತ್ರೆ ಪೂರೈಸಿದ್ದ ಆರೋಪಿಯನ್ನ ಬಂಧಿಸಲಾಗಿದೆ, ಆತನಿಂದ 6-7 ಮತ್ತೇರಿಸುವ ಮಾತ್ರೆಗಳನ್ನ ವಶಪಡಿಸಿಕೊಳ್ಳಲಾಗಿದೆ.