S Shorts

Karnataka Politics: “ಕದನ ವಿರಾಮ ತಾತ್ಕಾಲಿಕವೋ, ಶಾಶ್ವತವೋ ಗೊತ್ತಿಲ್ಲ” — ಸಚಿವ ಸತೀಶ್ ಜಾರಕಿಹೊಳಿ

Karnataka Politics: “ಕದನ ವಿರಾಮ ತಾತ್ಕಾಲಿಕವೋ, ಶಾಶ್ವತವೋ ಗೊತ್ತಿಲ್ಲ” — ಸಚಿವ ಸತೀಶ್ ಜಾರಕಿಹೊಳಿ
Author: Meghana Gowda
Posted By: Meghana Gowda
Updated: Dec 5, 2025 | 10:11 AM

ಬೆಂಗಳೂರು: ಕಾಂಗ್ರೆಸ್ (Congress) ನಾಯಕ ಐವನ್ ಡಿಸೋಜಾ (Ivan D’Souza) ಮತ್ತು ಮಿಥುನ್ ರೈ (Mithun Rai) ಅವರಿಗೆ ಎಐಸಿಸಿ (AICC) ನೀಡಿರುವ ನೋಟಿಸ್ (Notice) ಮತ್ತು ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳ (Internal Differences) ಕುರಿತು ಸಚಿವ ಸತೀಶ್ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಇಂದು ಮಾತನಾಡಿದರು.

AICC ನೋಟಿಸ್ ಬಗ್ಗೆ ಮಾಧ್ಯಮದವರು ಕೇಳಿದಾಗ, ಇದರ ಬಗ್ಗೆ ಸಂಬಂಧಪಟ್ಟವರನ್ನು ಕೇಳಬೇಕು. ನಮ್ಮ ಪ್ರಕಾರ ಭಿನ್ನಾಭಿಪ್ರಾಯದ ಮಾತುಕತೆ ನಿಂತಿದೆ. ಕದನ ವಿರಾಮ (Ceasefire) ತಾತ್ಕಾಲಿಕವೋ (Temporary), ಪೂರ್ತಿಯೋ (Complete) ನಮಗಿನ್ನೂ ಗೊತ್ತಿಲ್ಲ. ವೇಣುಗೋಪಾಲ್ (K.C. Venugopal) ಅವರು ಬಂದಾಗ ಏನು ಮಾತುಕತೆಯಾಗಿದೆ ಎಂಬುದು ನಮಗೆ ತಿಳಿದಿಲ್ಲ ಎಂದರು

ಮಿಥುನ್ ರೈ ಮತ್ತು ಐವನ್ ಡಿಸೋಜಾಗೆ ಎಐಸಿಸಿ ನೋಟಿಸ್‌ ನೀಡಿರುವ ವಿಚಾರವನ್ನು ಹೈಕಮಾಂಡ್ (High Command) ಒಂದು ಹಂತಕ್ಕೆ ತರುವ ಪ್ರಯತ್ನ ಮಾಡಿದೆ. ಹೀಗಿರುವಾಗ ಮತ್ತೊಮ್ಮೆ ಪಕ್ಷದಲ್ಲಿ ಡಿವೈಡ್ (Divide) ಮಾಡುವ ಕೆಲಸ ಮಾಡಬಾರದು ಎಂದು ಹೇಳಿದರು.