ಹುಬ್ಬಳ್ಳಿ: ಬ್ಯಾಂಕ್ ಖಾತೆಯಲ್ಲಿ ಕೋಟಿ ಕೋಟಿ ಬ್ಯಾಲೆನ್ಸ್ ಇಟ್ಟವರೇ ಎಚ್ಚರ! ಡಿಜಿಟಲ್ ಅರೆಸ್ಟ್ (Digital Arrest) ಹೆಸರಿನಲ್ಲಿ ಸೈಬರ್ ಅಪರಾಧಿಗಳು ಇದೀಗ ಹೊಸ ಕೌಶಲ್ಯಕ್ಕೆ ಕೈ ಹಾಕಿದ್ದಾರೆ.
ಹುಬ್ಬಳ್ಳಿಯ 76 ವರ್ಷದ ಉದ್ಯಮಿ ನಾಗೇಶ್ ಶರ್ಮಾ, ಕೇಶವಾಪುರದ ವಿನಯ ಕಾಲೋನಿಯ ನಿವಾಸಿ, 1.07 ಕೋಟಿ ರೂ. ವಂಚನೆಗೆ ಬಲಿಯಾದ ಘಟನೆ ವರದಿಯಾಗಿದೆ.
ಮುಂಬೈ ಕೊಲಬಾ ಪೊಲೀಸ್ ಠಾಣೆಯ ಅಧಿಕಾರಿಗಳೆಂದು ಕರೆ ಮಾಡಿದ ವಂಚಕರು “ನಿಮ್ಮ ಮೇಲೆ ಪ್ರಕರಣ ಇದೆ, ಡಿಜಿಟಲ್ ಅರೆಸ್ಟ್ ಮಾಡಲಾಗಿದೆ” ಎಂದು ಹೆದರಿಸಿ ಹಣ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ. ಹೆದರಿದ ನಾಗೇಶ್ ಶರ್ಮಾ ಹಂತ ಹಂತವಾಗಿ 1.07 ಕೋಟಿ ರೂ. ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ.
ನಂತರ ವಂಚನೆ ನಡೆದಿದೆ ಎಂಬುದು ಅರಿವಾದ ಬಳಿಕ ಹುಬ್ಬಳ್ಳಿ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಾಗರಿಕರು ಇಂತಹ ಕರೆಗಳಿಂದ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
