S Shorts

ತಲಕಾಡಿನಲ್ಲಿ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರು ಪಾಲು

ತಲಕಾಡಿನಲ್ಲಿ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರು ಪಾಲು
Author: Savina Naik
Posted By: Savina Naik
Updated: Apr 21, 2026 | 6:03 PM

ಮೈಸೂರು:  ತಲಕಾಡಿನಲ್ಲಿ ಕಾವೇರಿ ನದಿಗೆ ಇಳಿದಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರುಪಾಲಾಗಿದ್ದು, ಮತ್ತೋರ್ವಳ ಸ್ಥಿತಿ ಗಂಭೀರವಾಗಿದೆ. ಟಿ.ನರಸೀಪುರ ತಾಲೂಕಿನ ತಲಕಾಡಿನ ನಿಸರ್ಗಧಾಮದಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದ ಚಾರ್ವಿ(15), ರಮ್ಯಾ(16) ಮೃತ ಬಾಲಕಿಯರಾಗಿದ್ದು, ಮತ್ತೊಬ್ಬ ವಿದ್ಯಾರ್ಥಿನಿ ಸುಚಿತ್ರಾ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಶಾಲೆಯಿಂದ ಪ್ರವಾಸಕ್ಕೆಂದು 72 ವಿದ್ಯಾರ್ಥಿಗಳು ತಲಕಾಡಿಗೆ ಆಗಮಿಸಿದ್ದರು ಎನ್ನಲಾಗಿದೆ.

ಕಳೆದ ಮೂರೇ ದಿನಗಳಲ್ಲಿ ಕಾವೇರಿ ನದಿಯಲ್ಲಿ 10 ಮಂದಿ ಜೀವ ಕಳೆದುಕೊಂಡಿದ್ದಾರೆ. ಪ್ರವಾಸಕ್ಕೆ ತೆರಳಿದ್ದವರು, ಈಜಲು ಹೋದವರು ಹೀಗೆ ಹಲವರು ನದಿ ನೀರಿಗೆ ಬಲಿಯಾಗಿರೋದು ಆತಂಕ ಹೆಚ್ಚಿಸಿದೆ.

ಈ ಹಿಂದೆ ಊರುಸ್​​ ಹಿನ್ನೆಲೆ ಮೈಸೂರು ಜಿಲ್ಲೆಯ ಕೆ.ಆರ್.ನಗರಕ್ಕೆ ಬಂದಿದ್ದ ಎಂಟು ಜನರ ತಂಡ ಅರ್ಕೇಶ್ವರ ದೇವಸ್ಥಾನದ ಸಮೀಪವಿರುವ ಕಾವೇರಿ ನದಿಗೆ ಈಜಲು ತೆರಳಿ ನೀರುಪಾಲಾಗಿತ್ತು. ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದರೆ, ಉಳಿದ 6 ಮಂದಿ ಜೀವ ಕಳೆದುಕೊಂಡಿದ್ದರು