S Shorts

ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ‘ಪೋರ್ಷೆ’ ಕಾರನ್ನೇ ಬಳಸಿದ ಉದ್ಯಮಿ!

ಬೆಂಗಳೂರು ರಸ್ತೆ ಗುಂಡಿ ಮುಚ್ಚಲು ‘ಪೋರ್ಷೆ’ ಕಾರನ್ನೇ ಬಳಸಿದ ಉದ್ಯಮಿ!
Author: Savina Naik
Posted By: Savina Naik
Updated: Apr 21, 2026 | 5:37 PM

ಬೆಂಗಳೂರು:  ಬೆಂಗಳೂರಿನ  ಉದ್ಯಮಿಯೊಬ್ಬರು ರಸ್ತೆ ಗುಂಡಿ ಮುಚ್ಚಲು ಕಂಡುಕೊಂಡ ದಾರಿ ಈಗ ಇಡೀ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಬೆಂಗಳೂರಿನ ಉದ್ಯಮಿ ಅಖಿಲ್ ಹಿಮಾದ್ರಿ ಅವರು ರಸ್ತೆ ಬದಿಯಲ್ಲಿ ತಮ್ಮ ಪೋರ್ಷೆ ಕಾರನ್ನು ನಿಲ್ಲಿಸಿ, ಅದರ ಮುಂಭಾಗದ ಬಾನೆಟ್ ಮೇಲೆ ಸಿಮೆಂಟ್ ಮತ್ತು ಜಲ್ಲಿಯನ್ನು ಸುರಿಯುತ್ತಾರೆ. ನಂತರ ಬಿಸ್ಲೇರಿ ಬಾಟಲಿಯ ನೀರು ಹಾಕಿ ಅಲ್ಲಿಯೇ ಸಿಮೆಂಟ್ ಮಿಶ್ರಣವನ್ನು ಸಿದ್ಧಪಡಿಸುತ್ತಾರೆ. ಸಿಮೆಂಟ್ ಮಿಶ್ರಣ ಸಿದ್ಧವಾದ ಕೂಡಲೇ ಹಿಮಾದ್ರಿ ಅವರೇ ಖುದ್ದಾಗಿ ಹೋಗಿ  ರಸ್ತೆಯ ಗುಂಡಿಯನ್ನು ತುಂಬಿದ್ದಾರೆ.

 

View this post on Instagram

 

A post shared by Akhil Yadav (@akhilhemadri)

ಕೋಟ್ಯಂತರ ರೂಪಾಯಿ ಬೆಲೆಬಾಳುವ ತನ್ನ ಐಷಾರಾಮಿ ‘ಪೋರ್ಷೆ’ ಕಾರನ್ನೇ  ಅವರು ಸಿಮೆಂಟ್ ಮಿಕ್ಸಿಂಗ್ ಮೆಷಿನ್ ಮಾಡಿಕೊಂಡಿದ್ದಾರೆ. ಈ ದೃಶ್ಯ ನೋಡಿದ ಹಾದಿಹೋಕರು ಒಂದು ಕ್ಷಣ ನಿಂತು ನೋಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು,   ಪ್ರಚಾರವಿರಲಿ ಅಥವಾ ಕಾಳಜಿ ಇರಲಿ, ಬೆಂಗಳೂರಿನ ಗುಂಡಿಗಳ ಸಮಸ್ಯೆಯನ್ನು ವಿಶ್ವಮಟ್ಟದಲ್ಲಿ ಚರ್ಚೆಯಾಗುವಂತೆ ಮಾಡುವಲ್ಲಿ ಮಾತ್ರ ಈ ‘ಮಿಲಿಯನೇರ್’ ಸಫಲರಾಗಿದ್ದಾರೆ ಎಂದಿದ್ದಾರೆ.