S Shorts

ಈ ಸುಡುವ ಬಿಸಿಲಿನಲ್ಲಿ ಅತಿಯಾಗಿ ತಣ್ಣೀರು ಕುಡಿಯುತ್ತಿದ್ದೀರಾ? ಈ 5 ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು!

ಈ ಸುಡುವ ಬಿಸಿಲಿನಲ್ಲಿ ಅತಿಯಾಗಿ ತಣ್ಣೀರು ಕುಡಿಯುತ್ತಿದ್ದೀರಾ? ಈ 5 ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು!
Author: Savina Naik
Posted By: Savina Naik
Updated: Apr 14, 2026 | 12:04 PM

ಬೆಂಗಳೂರುಸುಡುವ ಬಿಸಿಲಿನಲ್ಲಿ ದೀರ್ಘಕಾಲ ಕಳೆದ ನಂತರ, ಮನೆಗೆ ಬಂದಾಗ ಬೆವರು ಮತ್ತು ತೀವ್ರ ಬಾಯಾರಿಕೆಯಾಗುವುದು ಸಹಜ. ಹೆಚ್ಚಿನ ಜನರು ಸ್ವಲ್ಪ ಪರಿಹಾರವನ್ನು ಅನುಭವಿಸಲು ತಕ್ಷಣ ರೆಫ್ರಿಜರೇಟರ್‌ನಿಂದ ತಣ್ಣೀರನ್ನು  ಕುಡಿಸಯುತ್ತಾರೆ. ಆದರೆ ಈ  ನೀರು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲದಿರಬಹುದು. ತಣ್ಣನೆಯ ನೀರು ಹೆಚ್ಚಾದಷ್ಟೂ ಹಾನಿ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ವಿಜ್ಞಾನದ ಪ್ರಕಾರ, ತಣ್ಣನೆಯ ನೀರನ್ನು ಕುಡಿಯುವುದು – ತುಂಬಾ ಬಿಸಿ ವಾತಾವರಣದಲ್ಲಿ  ನಿಮ್ಮ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬಿರುತ್ತದೆ.

ಜೀರ್ಣಕ್ರಿಯೆಯಲ್ಲಿ ವ್ಯತ್ಯಯ

ತಣ್ಣೀರು ಕುಡಿಯುವುದರಿಂದ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಇದರಿಂದಾಗಿ ಆಹಾರವು ಸರಿಯಾಗಿ ಜೀರ್ಣವಾಗುವುದಿಲ್ಲ. ತಣ್ಣೀರು ಸೇವನೆಯು ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಗಂಟಲು ನೋವು ಮತ್ತು ಸೋಂಕು

ಅತಿಯಾದ ತಣ್ಣೀರು ಸೇವನೆಯು ಉಸಿರಾಟದ ನಾಳದಲ್ಲಿ ಲೋಳೆಯ ಪದರವು ಹೆಚ್ಚಾಗಲು ಕಾರಣವಾಗುತ್ತದೆ. ಇದು ಗಂಟಲು ನೋವು, ಕೆಮ್ಮು ಮತ್ತು ಉಸಿರಾಟದ ಸೋಂಕುಗಳಿಗೆ ದಾರಿ ಮಾಡಿಕೊಡುತ್ತದೆ.

ಹೃದಯ ಬಡಿತದ ಮೇಲೆ ಪರಿಣಾಮ

ಕೆಲವು ಸಂಶೋಧನೆಗಳ ಪ್ರಕಾರ, ತಣ್ಣೀರು ಕುಡಿಯುವುದರಿಂದ ದೇಹದ ‘ವಾಗಸ್ ನರ’ ಪ್ರಚೋದನೆಗೊಳ್ಳುತ್ತದೆ. ಇದು ಹೃದಯದ ಬಡಿತವನ್ನು ಹಠಾತ್ತಾಗಿ ಕಡಿಮೆ ಮಾಡಬಹುದು, ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ.

ಮಲಬದ್ಧತೆ ಸಮಸ್ಯೆ

ಊಟದ ನಂತರ ತಣ್ಣೀರು ಕುಡಿಯುವ ಅಭ್ಯಾಸವಿದ್ದರೆ ಎಚ್ಚರ! ತಣ್ಣೀರು ಸೇವನೆಯು ನಾವು ತಿಂದ ಆಹಾರದಲ್ಲಿನ ಕೊಬ್ಬಿನಂಶವನ್ನು ಗಟ್ಟಿಯಾಗಿಸುತ್ತದೆ. ಇದರಿಂದ ಆಹಾರವು ಕರುಳಿನಲ್ಲಿ ಸರಾಗವಾಗಿ ಸಾಗದೆ ಮಲಬದ್ಧತೆ ಸಮಸ್ಯೆಗೆ ಕಾರಣವಾಗುತ್ತದೆ.

ತಲೆನೋವು ಮತ್ತು ಮೈಗ್ರೇನ್

ಅತಿಯಾದ ತಣ್ಣೀರು ಅಥವಾ ಐಸ್ ವಾಟರ್ ಕುಡಿಯುವುದರಿಂದ ‘ಬ್ರೈನ್ ಫ್ರೀಜ್’ ಆಗುವ ಸಾಧ್ಯತೆ ಇರುತ್ತದೆ. ಇದು ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.

ತಜ್ಞರ ಸಲಹೆ ಏನು?

ಆರೋಗ್ಯವಾಗಿರಲು ಯಾವಾಗಲೂ ಸಾಮಾನ್ಯ ತಾಪಮಾನದ ನೀರು ಅಥವಾ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದು ಉತ್ತಮ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನಕ್ಕಾಗಿ ಮಾತ್ರ. ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಗಂಭೀರ ಸಮಸ್ಯೆಗಳಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮವಾಗಿದೆ.

ನಟಿ ತ್ರಿಶಾ ಕೃಷ್ಣನ್ ಮನೆಗೆ ಬಾಂಬ್ ಬೆದರಿಕೆ!