S Shorts

ಕೊಪ್ಪಳ ಯುವಕನ ಮೊಬೈಲ್‌ನಲ್ಲಿ 9700 ಅಶ್ಲೀಲ ವಿಡಿಯೋ, 7000 ಫೋಟೋ ಪತ್ತೆ! ಆತನ ರಕ್ಷಣೆಗೆ ನಿಂತ ಪ್ರಿಯತಮೆ!

ಕೊಪ್ಪಳ ಯುವಕನ ಮೊಬೈಲ್‌ನಲ್ಲಿ 9700 ಅಶ್ಲೀಲ ವಿಡಿಯೋ, 7000 ಫೋಟೋ ಪತ್ತೆ! ಆತನ ರಕ್ಷಣೆಗೆ ನಿಂತ ಪ್ರಿಯತಮೆ!
Author: Savina Naik
Posted By: Savina Naik
Updated: Apr 13, 2026 | 5:00 PM

ಕೊಪ್ಪಳ: ಪ್ರಿಯತಮೆಯೊಂದಿಗೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಯುವಕನೊಬ್ಬನನ್ನು ಪರಿಶೀಲಿಸಿದಾಗ ಆತನ ಬಳಿ ಪತ್ತೆಯಾದ  ಎರಡು ಮೊಬೈಲ್‌ಗಳ ವಿವರ ಕೆದಕಿರುವ ಪೊಲೀಸರೇ ಅಕ್ಷರಶಃ ದಿಗ್ಧಮೆಗೆ ಒಳಗಾಗಿದ್ದಾರೆ. 

ಎಪ್ರಿಲ್ 9ರಂದು ಕೊಪ್ಪಳದ ಜಿಲ್ಲಾಸ್ಪತ್ರೆ ಆವರಣದಲ್ಲಿ ಮುಸ್ತಾಫಾ ಯುವತಿಯೊಬ್ಬಳ ಜೊತೆ ಏಕಾಂತದಲ್ಲಿದ್ದಾಗ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಅವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಯುವಕನ ಮೊಬೈಲ್ ಪರಿಶೀಲಿಸಿದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಯುವಕ ಉದ್ದೇಶಪೂರ್ವಕವಾಗಿಯೇ ಇಷ್ಟೊಂದು ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ. ಸಂಗಮೇಶ ಹಿರೇಮಠ ಮತ್ತು ತಂಡದವರು ಆರೋಪಿಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವಿಡಿಯೋಗಳನ್ನು ಇತರರಿಗೆ ರವಾನಿಸಿ ಕಿರುಕುಳ ನೀಡುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಮುಸ್ತಾಫಾ ಎಂಬ ಯುವಕನಿಂದ ವಶಪಡಿಸಿಕೊಳ್ಳಲಾದ ಎರಡು ಮೊಬೈಲ್ ಫೋನ್‌ಗಳಲ್ಲಿ ಬರೋಬ್ಬರಿ 9,700 ಅಶ್ಲೀಲ ವಿಡಿಯೋಗಳು ಹಾಗೂ 7,000 ಅಶ್ಲೀಲ ಫೋಟೋಗಳು ಪತ್ತೆಯಾಗಿವೆ. ಇದರಲ್ಲಿ 16ಕ್ಕೂ ಹೆಚ್ಚು ಹುಡುಗಿಯರ ನಗ್ನ ಮತ್ತು ಅಶ್ಲೀಲ ದೃಶ್ಯಗಳಿರುವುದು ಪತ್ತೆಯಾಗಿದೆ.

ಆತನ ಪ್ರಿಯತಮೆ ಎನ್ನಲಾದ ಕುಷ್ಟಗಿ ತಾಲೂಕಿನ ವಿದ್ಯಾರ್ಥಿನಿ ಪ್ರತಿ ದೂರು ದಾಖಲಿಸಿದ್ದಾಳೆ. “ನಾವು ಪ್ರೇಮಿಗಳಾಗಿದ್ದು, ಊಟಕ್ಕೆ ಕುಳಿತಾಗ ಬಂದ 8-10 ಅಪರಿಚಿತರು ನಮ್ಮ ಜಾತಿ ಕೇಳಿ ಹಲ್ಲೆ ನಡೆಸಿದ್ದಾರೆ. ಮುಸ್ತಾಫಾನ ಮೊಬೈಲ್ ಕಸಿದುಕೊಂಡು ನಮಗೆ ಜೀವ ಬೆದರಿಕೆ ಹಾಕಿದ್ದಾರೆ” ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

 ಸದ್ಯ ಕೊಪ್ಪಳ ನಗರ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿವೆ. ಒಂದೆಡೆ ಸಾವಿರಾರು ಅಶ್ಲೀಲ ವಿಡಿಯೋಗಳ ಪತ್ತೆಯಾಗಿರುವ ಗಂಭೀರ ಆರೋಪ, ಇನ್ನೊಂದೆಡೆ ಯುವತಿಯಿಂದ ಜೀವ ಬೆದರಿಕೆ ದೂರು. ಈ ಮೊಬೈಲ್‌ನಲ್ಲಿರುವ ವಿಡಿಯೋಗಳ ಅಸಲಿಯತ್ತೇನು? ಇದನ್ನು ದುರ್ಬಳಕೆ ಮಾಡಲಾಗುತ್ತಿತ್ತೇ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.