S Shorts

ಬೆಂಗಳೂರು ತ್ರಿವಳಿ ಕೊಲೆಗೆ ಬಿಗ್ ಟ್ವಿಸ್ಟ್: ಪಾಂಡಿಚೇರಿಯಲ್ಲಿ ಸಿಕ್ಕಿಬಿದ್ದ ಆರೋಪಿ ಶ್ವೇತಾ ತಪ್ಪೊಪ್ಪಿಗೆ!

ಬೆಂಗಳೂರು ತ್ರಿವಳಿ ಕೊಲೆಗೆ ಬಿಗ್ ಟ್ವಿಸ್ಟ್: ಪಾಂಡಿಚೇರಿಯಲ್ಲಿ ಸಿಕ್ಕಿಬಿದ್ದ ಆರೋಪಿ ಶ್ವೇತಾ ತಪ್ಪೊಪ್ಪಿಗೆ!
Author: Meghana Gowda
Posted By: Meghana Gowda
Updated: Jun 24, 2026 | 12:52 PM

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ನಡುಗಿಸಿದ್ದ ತಂದೆ, ತಾಯಿ ಹಾಗೂ ತಂಗಿಯ ಭೀಕರ ತ್ರಿವಳಿ ಕೊಲೆ ಪ್ರಕರಣಕ್ಕೆ (Triple Murder Case) ಇದೀಗ ತನಿಖೆಯ ವೇಳೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಮುಖ್ಯ ಆರೋಪಿಯಾದ ಮಗಳು ಶ್ವೇತಾಳನ್ನು ಕೆ.ಆರ್. ಪುರಂ ಪೊಲೀಸರು ಪಾಂಡಿಚೇರಿ ರೈಲು ನಿಲ್ದಾಣದಲ್ಲಿ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಆಕೆ ಪೋಷಕರನ್ನು ಕೊಂದ ಘೋರ ಕೃತ್ಯದ ಹಿಂದಿನ ಕಾರಣಗಳನ್ನು ಬಾಯ್ಬಿಟ್ಟಿದ್ದಾಳೆ.

ಆರೋಪಿ ಶ್ವೇತಾ ಯುವಕನೊಬ್ಬನ ಜೊತೆ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದಳು (Living Relationship). ಇದನ್ನು ವಿರೋಧಿಸಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಅಪಾರ್ಟ್‌ಮೆಂಟ್‌ಗೆ ಬಂದಿದ್ದ ಪೋಷಕರು ಮತ್ತು ತಂಗಿಯ ಮೇಲೆಯೇ ಶ್ವೇತಾ ಹಾಗೂ ಆಕೆಯ ಪ್ರಿಯಕರ ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿದ್ದರು. ತನಿಖೆಯ ಪ್ರಕಾರ, ಶ್ವೇತಾ ತಾನೇ ಸ್ವತಃ ಚಾಕುವಿನಿಂದ ಇರಿದು ಹೆತ್ತ ತಾಯಿಯ ಜೀವ ತೆಗೆದಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ.

ಕೊಲೆಗೆ ಕಾರಣ ಏನೆಂದು ಪೊಲೀಸರು ಪ್ರಶ್ನಿಸಿದಾಗ ಶ್ವೇತಾ ಆಕ್ರೋಶ ಹೊರಹಾಕಿದ್ದಾಳೆ. “ನನ್ನ ತಾಯಿಯೇ ನನ್ನ ಜೀವನವನ್ನು ಸಂಪೂರ್ಣವಾಗಿ ಕಂಟ್ರೋಲ್ ಮಾಡುತ್ತಿದ್ದರು. ನಾನು ಏನೂ ಮಾಡಲು ಅವಕಾಶ ಕೊಡುತ್ತಿರಲಿಲ್ಲ, ನನ್ನನ್ನು ಸ್ವತಂತ್ರವಾಗಿ ಬದುಕಲು ಬಿಡುತ್ತಿರಲಿಲ್ಲ. ಅವಳೇ ನನ್ನ ಜೀವನವನ್ನು ಹಾಳು ಮಾಡಿದ್ದಾಳೆ. ಇದೇ ಕೋಪದಲ್ಲಿ ನಾನು ನನ್ನ ತಾಯಿಯನ್ನು ಕೊಂದೆ” ಎಂದು ಶ್ವೇತಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.

ಪೊಲೀಸರು ಶ್ವೇತಾ ವಾಸವಿದ್ದ ಮನೆಯನ್ನು ತಪಾಸಣೆ ನಡೆಸಿದಾಗ ಮಹತ್ವದ ಡೈರಿಯೊಂದು (Personal Diary) ಪತ್ತೆಯಾಗಿದೆ. ಹಲವು ದಿನಗಳಿಂದ ಡೈರಿ ಬರೆಯುತ್ತಿದ್ದ ಶ್ವೇತಾ, ಅದರಲ್ಲಿ ತನ್ನ ಮಾನಸಿಕ ಸ್ಥಿತಿಯನ್ನು ಹಂಚಿಕೊಂಡಿದ್ದಾಳೆ. ಡೈರಿಯಲ್ಲಿ “I am sad, I’m lonely, feeling loved, I’m dispersed, I’m superior” (ನಾನು ದುಃಖದಲ್ಲಿದ್ದೇನೆ, ಏಕಾಂಗಿಯಾಗಿದ್ದೇನೆ, ಪ್ರೀತಿಯನ್ನು ಬಯಸುತ್ತಿದ್ದೇನೆ…) ಎಂದು ಬರೆದುಕೊಂಡಿರುವುದು ಪತ್ತೆಯಾಗಿದೆ.