ಬೆಂಗಳೂರು: ಬೆಂಗಳೂರು ಟು ಚನ್ನಪಟ್ಟಣದ ನಡುವೆ ಓಡಾಡುವ ಪ್ರಯಾಣಿಕರ ಅನುಕೂಲಕ್ಕಾಗಿ 8 ಬಿಎಂಟಿಸಿ ಎಸಿ ಬಸ್ಗಳಿಗೆ ಸಾರಿಗೆ ಇಲಾಖೆ ಚಾಲನೆ ನೀಡಲಾಗಿದೆ.
ಚನ್ನಪಟ್ಟಣದಿಂದ ಬೆಂಗಳೂರಿಗೆ, ಬೆಂಗಳೂರಿಂದ-ಚನ್ನಪಟ್ಟಣಕ್ಕೆ ಇನ್ಮುಂದೆ ಬಿಎಂಟಿಸಿ ಎಸಿ ಬಸ್ಗಳು ಓಡಾಡಲಿವೆ. ಈ ಬಿರು ಬೇಸಿಗೆಯಲ್ಲಿ ಜನರು ಎಸಿ ಬಸ್ನಲ್ಲಿ ಕೂತು ಆರಾಮಾಗಿ ಪ್ರಯಾಣ ಮಾಡ್ಬಹುದಾಗಿದೆ. ಈ 8 ಬಿಎಂಟಿಸಿ ಎಸಿ ಬಸ್ಗಳು ಬೆಂಗಳೂರು ಹಾಗೂ ಚನ್ನಪಟ್ಟಣ ನಡುವೆ ನಿತ್ಯ 44 ಟ್ರಿಪ್ ಓಡಾಡಲಿದೆ.
ಮೆಜೆಸ್ಟಿಕ್ನಿಂದ ಹೊರಡುವ ಈ ಬಸ್ ಚನ್ನಪಟ್ಟಣ, ರಾಮನಗರ ಹಾಗೂ ಕೆಂಗೇರಿಯಲ್ಲೂ ಸ್ಟಾಪ್ ನೀಡಲಿದೆ. ಈ ಬಿಎಂಟಿಸಿ ಎಸಿ ಬಸ್ನಲ್ಲಿ ಪ್ರಯಾಣ ಮಾಡಲು ಪ್ರಯಾಣಿಕರು ತುಸು ಹೆಚ್ಚಾಗಿಯೇ ಹಣ ಕೊಡಬೇಕಿದೆ. ಮೆಜೆಸ್ಟಿಕ್ನಿಂದ ಚನ್ನಪಟ್ಟಣಕ್ಕೆ ಈ ಬಸ್ನಲ್ಲಿ 105 ರೂಪಾಯಿ ದರ ನಿಗದಿ ಮಾಡಲಾಗಿದೆ
ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಇಂದು ಈ ನೂತನ 8 ಬಿಎಂಟಿಸಿ ಎಸಿ ಬಸ್ಗಳಿಗೆ ಹಸಿರು ನಿಶಾನೆ ತೋರಿದ್ದಾರೆ.
