ರಾಂಚಿ: ಬೀದಿಬದಿ ಪಾನಿಪುರಿ ಸೇವಿಸಿದ ಬಳಿಕ ಅನಾರೋಗ್ಯಕ್ಕೀಡಾಗಿ ಒಬ್ಬ ಬಾಲಕ ಸಾವಿಗೀಡಾಗಿದ್ದು, 18 ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಾರ್ಖಂಡ್‌ನ ಗಿರಿದಿಹ್ ಎಂಬಲ್ಲಿ ನಡೆದಿದೆ.
ಅಸ್ವಸ್ಥರಾದವರೆಲ್ಲರೂ ಬೀದಿ ಬದಿಯ ಒಂದೇ ಪಾನಿಪುರಿ ಅಂಗಡಿಯಲ್ಲಿ ಪಾನಿಪುರಿ ಸೇವಿಸಿದ್ದರು. ಅಸ್ವಸ್ಥರಾದ 18 ಜನರಲ್ಲಿ ಬಹುತೇಕ ಮಕ್ಕಳೇ ಆಗಿದ್ದಾರೆ. ಪಾನಿಪುರಿ ಸೇವಿಸಿ ಮನೆಗೆ ಬಂದ ನಂತರ ಕೆಲವರಿಗೆ ತೀವ್ರ ಜ್ವರ ಕಾಣಿಸಿಕೊಂಡರೆ ಮತ್ತೆ ಕೆಲವರಿಗೆ ಹೊಟ್ಟೆನೋವು, ವಾಂತಿ ಶುರುವಾಗಿದೆ.
ರಸ್ತೆ ಬದಿ ಪಾನಿಪುರಿ ಸೇವಿಸಿದ ನಂತರ ಎಲ್ಲರಿಗೂ ಹೊಟ್ಟೆನೋವು ಹಾಗೂ ವಾಂತಿ ಶುರುವಾಗಿದ್ದು, ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದ್ದಾರೆ. ಘಟನೆಯ ಬಳಿಕ ಪಾನಿಪುರಿ ಮಾರಾಟಗಾರ ನಾಪತ್ತೆಯಾಗಿದ್ದಾರೆ. ಘಟನೆಯಲ್ಲಿ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ.
ಚಿಕಿತ್ಸೆ ಪಡೆಯುತ್ತಿರುವವರನ್ನು ಬಹಳ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
