ಚಿಕ್ಕಮಗಳೂರು: ನಿಪ್ಪಾಣಿಯಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಎದುರು ನಡೆದಿದ್ದ ಗಲಾಟೆಯ ಬೆನ್ನಲ್ಲೇ, ಇದೀಗ ಚಿಕ್ಕಮಗಳೂರಿನಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಭಾರಿ ಹೈಡ್ರಾಮಾ ನಡೆದಿದೆ. ಕಾಮಗಾರಿ ವೀಕ್ಷಣೆಗೆ ತೆರಳಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ‘ಗೋ ಬ್ಯಾಕ್’ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ ಹಾಗೂ ಕೈಕೈ ಮಿಲಾಯಿಸುವ ಹಂತಕ್ಕೆ ಜಗಳ ತಲುಪಿದೆ.
ನಗರದ ರಾಂಪುರದಿಂದ ಶಕ್ತಿನಗರದವರೆಗಿನ ಕಾಮಗಾರಿಗಳನ್ನು ವೀಕ್ಷಿಸಿ ವಾಪಸಾಗುತ್ತಿದ್ದ ವೇಳೆ ಸಿ.ಟಿ. ರವಿ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ದಿಢೀರ್ ಅಡ್ಡಗಟ್ಟಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮುಖಾಮುಖಿಯಾಗಿದ್ದು, ಎರಡೂ ಕಡೆಯಿಂದ ಘೋಷಣೆಗಳ ಸುರಿಮಳೆಯೇ ನಡೆದಿದೆ. ಪರಿಸ್ಥಿತಿ ತೀರಾ ವಿಕೋಪಕ್ಕೆ ತಿರುಗಿ, ಸಿ.ಟಿ. ರವಿ ಸಮ್ಮುಖದಲ್ಲಿಯೇ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿ ಹೊಡೆದಾಡಿಕೊಂಡಿದ್ದಾರೆ. ಇದರಿಂದ ತೀವ್ರ ಆಕ್ರೋಶಗೊಂಡ ಸಿ.ಟಿ. ರವಿ ಹಾಗೂ ಬಿಜೆಪಿ ಕಾರ್ಯಕರ್ತರು ರಸ್ತೆ ಮಧ್ಯೆಯೇ ಕುಳಿತು ಧರಣಿ ನಡೆಸುವ ಮೂಲಕ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಳಿಕ ಶಾಸಕ ಹೆಚ್.ಡಿ. ತಮ್ಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸಿ.ಟಿ. ರವಿ, “ಕ್ಷೇತ್ರಕ್ಕೆ 5,800 ಕೋಟಿ ರೂ. ಅನುದಾನ ಹಾಗೂ ಮೆಡಿಕಲ್ ಕಾಲೇಜು ತಂದಿದ್ದು ನಾನು. 2022ರಲ್ಲೇ ಮಂಜೂರಾಗಿದ್ದ ಕಾಮಗಾರಿಗೆ ಈಗ ಕೇವಲ ವರ್ಕ್ ಆರ್ಡರ್ ನೀಡಿದ್ದಾರೆ. ನಾನು ಕಾಮಗಾರಿ ವೀಕ್ಷಣೆಗೆ ಬಂದಾಗ ಕೆಲ ಚೇಲಾಗಳನ್ನು ಛೂ ಬಿಟ್ಟು ಈ ಗಲಾಟೆ ಮಾಡಿಸಿದ್ದಾರೆ. ನನ್ನ ಮೇಲೆಯೇ ಹಲ್ಲೆಗೆ ಯತ್ನಿಸಲಾಗಿದೆ. ಇಂತಹ ಗೂಂಡಾಗಿರಿ ಹಾಗೂ ಚಿಲ್ಲರೆ ರಾಜಕಾರಣಕ್ಕೆ ನಾನು ಹೆದರಿ ಓಡಿಹೋಗುವವನಲ್ಲ, ಸತ್ಯವನ್ನು ಯಾವತ್ತಿದ್ದರೂ ಜನರ ಮುಂದಿಡುತ್ತೇನೆ” ಎಂದು ಗುಡುಗಿದ್ದಾರ
