S Shorts

ಜೈಲಿನಲ್ಲಿ ಕನಿಷ್ಠ ಸೌಲಭ್ಯವಿಲ್ಲದೆ ಪರದಾಡುತ್ತಿರುವ Darshan : ಮಾನವ ಹಕ್ಕುಗಳ ಮೊರೆ ಹೋಗಲು ನಿರ್ಧಾರ

ಜೈಲಿನಲ್ಲಿ ಕನಿಷ್ಠ ಸೌಲಭ್ಯವಿಲ್ಲದೆ ಪರದಾಡುತ್ತಿರುವ Darshan : ಮಾನವ ಹಕ್ಕುಗಳ ಮೊರೆ ಹೋಗಲು ನಿರ್ಧಾರ
Author: Meghana Gowda
Posted By: Meghana Gowda
Updated: Nov 1, 2025 | 5:27 AM

ಬೆಂಗಳೂರು: ರೇಣುಕಾಸ್ವಾಮಿ (Renukaswamy) ಕೊಲೆ ಕೇಸ್‌ ನಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ಗೆ (Darshan Thoogudeepa)ಕನಿಷ್ಠ ಸೌಲಭ್ಯವಿಲ್ಲದೆ ಪರದಾಡುವಂತಗಿದೆ. ಈ ಕುರಿತು ದರ್ಶನ್‌ ಖುದ್ದಾಗಿ ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲು ನಿರ್ಧಾರ‌ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದರ ನಡುವೆ ನಟ ದರ್ಶನ್‌ನನ್ನು ಭದ್ರತಾ ದೃಷ್ಟಿಯಿಂದ  ಒಳಗಿನ ಸೆಲ್‌ಗೆ ಶಿಷ್ಟ್‌  ಮಾಡುವುದು ಕಷ್ಟ ಎಂದು ಜೈಲಿನಲ್ಲಿರುವ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ.  ಹೀಗಾಗಿ ಮುಂದಿನ ದಿನಗಳಲ್ಲಿ  ಒಳಗಿನ ಸೆಲ್‌ಗೆ ಶಿಪ್ಟ್‌ ಮಾಡದಿದ್ದರೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ದರ್ಶನ್‌ ಪರ ವಕೀಲರು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.

ಇನ್ನ ಎರಡು ದಿನಗಳ ಒಳಗೆ ಯಾವುದು ಸರಿಯಾಗಿಲ್ಲ ಎಂದರೆ ನಟ ದರ್ಶನ್‌ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆಯುವುದರ ಮೂಲಕ ತಮ್ಮ ಬೇಡಿಕೆಯನ್ನು ಹೀಡೇರಿಸುವಂತೆ ಹೋರಾಟ ಮಾಡಲಿದ್ದಾರೆ ಎಂದು ಹೇಳಲಾಗುತ್ತದೆ.