ಬೆಂಗಳೂರು: ಧರ್ಮಸ್ಥಳ (Dharmasthala) ಕೇಸ್ ನ ಎಸ್ ಐಟಿ( SIT) ತನಿಖೆಗೆ ಹೈಕೋರ್ಟ್‌ನಲ್ಲಿ ತಾತ್ಕಾಲಿಕ ತಡೆ ನೀಡಲಾಗಿರುವ ಬಗ್ಗೆ ಸುಪ್ರೀಂಕೋರ್ಟ್‌ಗೆ ಹೋಗುವ ಕುರಿತು ಕಾನೂನು ಇಲಾಖೆ ಜೊತೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G. Parameshwara) ಹೇಳಿದರು.
ಈ ಬಗ್ಗೆ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಅವರು, ಹೈಕೋರ್ಟ್ ನೀಡಿರುವ ತಡೆಯಾಜ್ಞೆ ಬಗ್ಗೆ ಸರಿಯಾದ ಮಾಹಿತಿ ನನಗೆ ಗೊತ್ತಿಲ್ಲ. ಕಾನೂನು ಇಲಾಖೆ ಮತ್ತು ಎಜಿ ಜೊತೆ ಈ ಕೂಡಲೇ ಚರ್ಚಿಸಿ, ಸುಪ್ರೀಂಕೋರ್ಟ್ಗೆ ಅಪೀಲ್ ಹಾಕಬೇಕಾ ಅಥವಾ ಮುಂದೆ ಬೇರೆ ಏನು ಮಾಡಬಹುದು ಎಂದು ತೀರ್ಮಾನಿಸಲಾಗುತ್ತದೆ ಎಂದು ಹೇಳಿದರು.
