S Shorts

ಕಚೇರಿಯ ತಾಯಂದಿರಿಗೆ ಐಶಾರಾಮಿ ವಿಶ್ರಾಂತಿ ಕೊಠಡಿ ರೂಪಿಸಿದ DC

ಕಚೇರಿಯ ತಾಯಂದಿರಿಗೆ ಐಶಾರಾಮಿ ವಿಶ್ರಾಂತಿ ಕೊಠಡಿ ರೂಪಿಸಿದ DC
Author: Sagaradventure
Posted By: Sagaradventure
Updated: Nov 2, 2025 | 6:25 AM

ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಹಿಳಾ ನೌಕರರ ಅನುಕೂಲಕ್ಕಾಗಿ ವಿಶೇಷ ವಿಶ್ರಾಂತಿ ಕೋಣೆ ನಿರ್ಮಿಸಲಾಗಿದೆ. ಈ ಕೋಣೆಯಲ್ಲಿ ತಾಯಂದಿರು ತಮ್ಮ ಶಿಶುವಿಗೆ ಹಾಲುಣಿಸಲು ಪ್ರತ್ಯೇಕ ವಿಭಾಗವನ್ನೂ ವ್ಯವಸ್ಥೆ ಮಾಡಲಾಗಿದ್ಜು ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನುಮ್ ಅವರು ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿಯನ್ನು ಗಮನದಲ್ಲಿಟ್ಟುಕೊಂಡು ಈ ಸೌಲಭ್ಯವನ್ನು ಕಲ್ಪಿಸಿದ್ದಾರೆ. ತಾಯಂದಿರು ತಮ್ಮ ಕೆಲಸದ ವೇಳೆ ಮಗುವಿನ ಆರೈಕೆ ಮಾಡಲು ನೆರವಾಗುವ ಉದ್ದೇಶದಿಂದ ಈ ಸೌಲಭ್ಯ ಕಲ್ಪಿಸಲಾಗಿದ್ದು, ಇದರಿಂದ ತಾಯಿ ಮಗುವಿಗೆ ಹಾಲುಣಿಸಲು, ಆರೈಕೆ ಮಾಡಲು ಗೌಪ್ಯ.ತೆ ಸಿಗಲಿದೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನುಮ್ ತಿಳಿಸಿದ್ದಾರೆ.

ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿಗಳ ಅಧಿಕೃತ ಎಕ್ಸ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳಲಾಗಿದ್ದು, ವಿಐಪಿಗಳ ಗೆಸ್ಟ್ ಹೌಸ್ ಮಾದರಿಯಲ್ಲಿ ಕೊಠಡಿಯನ್ನು ರೂಪಿಸಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ಸಾಕಷ್ಟು ಮಂದಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು, ಹಲವರು ಪುರುಷ ಸಿಬ್ಬಂದಿಗೂ ಇಂತಹ ಸೌಲಭ್ಯ ಸಿಗುವಂತಾಗಲಿ ಎಂದು ತಿಳಿಸಿದ್ದಾರೆ.