S Shorts

Renukaswamy Murder Case: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪವಿತ್ರಾ ಗೌಡ!

Renukaswamy Murder Case: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪವಿತ್ರಾ ಗೌಡ!
Author: Meghana Gowda
Posted By: Meghana Gowda
Updated: Nov 4, 2025 | 7:23 AM

ಬೆಂಗಳೂರು:  ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy )ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಪವಿತ್ರಾ ಗೌಡ ಇದೀಗ ಸುಪ್ರೀಂ ಕೋರ್ಟ್ (Supreme Court )ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ತಾನು ಪಡೆದಿದ್ದ ಜಾಮೀನನ್ನು ರದ್ದುಪಡಿಸಿದ್ದ ಹಿನ್ನೆಲೆಯಲ್ಲಿ, ಪವಿತ್ರಾ ಗೌಡ ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದಾರೆ.

ಆದೇಶ ಪರಿಶೀಲನೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಗುರುವಾರ ನಡೆಯಲಿದ್ದು, ಸುಪ್ರೀಂ ಕೋರ್ಟ್ ಪವಿತ್ರಾ ಗೌಡ ಅರ್ಜಿಯನ್ನು ಪರಿಗಣಿಸಲಿದೆ.

ಈ ಪ್ರಕರಣದಲ್ಲಿ ನಟ ದರ್ಶನ್(Darshan) ಹಾಗೂ ಪವಿತ್ರಾ (Pavithra Gowda)ಗೌಡ ಸೇರಿದಂತೆ ಹಲವರು ಆರೋಪಿಗಳಾಗಿದ್ದು, ಹೈಕೋರ್ಟ್ ತೀರ್ಪಿನ ನಂತರ ಇದೀಗ ಪವಿತ್ರಾ ನ್ಯಾಯಾಂಗ ಹೋರಾಟ ಮುಂದುವರೆಸಿದ್ದಾರೆ.