ರಾಯಚೂರು: ಜಿಲ್ಲೆಯಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯಲ್ಲಿ, ಸೈಬರ್ ಕ್ರೈಂ ಪೊಲೀಸರು ಪ್ರತಿಷ್ಠಿತ ಕುಟುಂಬದ ಯುವಕನೊಬ್ಬನ ವಿರುದ್ಧ ಮಕ್ಕಳ ಲೈಂಗಿಕ ಶೋಷಣೆಯ ವಿಡಿಯೋಗಳನ್ನು (CSAM) ಅತಿಯಾಗಿ ವೀಕ್ಷಿಸಿದ ಆರೋಪದ ಮೇಲೆ ಒಟ್ಟು 32 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಪ್ರತಿಷ್ಠಿತ ಕುಟುಂಬದ ಯುವಕ ವೆಬ್‌ಸೈಟ್‌ಗಳಲ್ಲಿ ಹಗಲು-ರಾತ್ರಿ ಎನ್ನದೇ ಮಕ್ಕಳ ಅಶ್ಲೀಲ ವಿಡಿಯೋಗಳನ್ನು (Child Pornography) ನಿರಂತರವಾಗಿ ವೀಕ್ಷಿಸುತ್ತಿದ್ದ ಎಂದು ಆತನ ವಿರುದ್ಧ ಸೈಬರ್ ಕ್ರೈಂ ಪೊಲೀಸರು (Cyber Crime Police) ಕೇಸ್ ದಾಖಲಿಸಿದ್ದಾರೆ. ಅಶ್ಲೀಲ ವೆಬ್‌ಸೈಟ್‌ಗಳಲ್ಲಿ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ಆಧರಿಸಿ ಪೊಲೀಸರು ಯುವಕನನ್ನು ಪತ್ತೆ ಹಚ್ಚಿ ಎಫ್‌ಐಆರ್ ಹಾಕಿದ್ದಾರೆ.
ಮಕ್ಕಳ ಲೈಂಗಿಕ ಶೋಷಣೆಯ ವಸ್ತುಗಳನ್ನು (CSAM) ಕೇವಲ ವೀಕ್ಷಣೆ ಮಾಡುವುದು ಸಹ ಅಪರಾಧ. ಈ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇರುವುದಿಲ್ಲ. ಚೈಲ್ಡ್ ಸೆಕ್ಸ್ಯುಯಲ್ ಮೆಟಿರೀಯಲ್ ಆ್ಯಕ್ಟ್ ನ ಪ್ರಕಾರ ಅಪರಾಧ ಸಾಬೀತಾದರೆ, 5 ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ₹10 ಲಕ್ಷ ರೂಪಾಯಿ ದಂಡ ವಿಧಿಸಲು ಅವಕಾಶವಿದೆ.
