S Shorts

ಕಲಬುರಗಿಯಲ್ಲಿ ಪುದುಚೇರಿ ವಾಹನ ನೋಂದಣಿಗೆ 2 ಕೋಟಿ ರೂ. ದಂಡ ಸಂಗ್ರಹ

ಕಲಬುರಗಿಯಲ್ಲಿ ಪುದುಚೇರಿ ವಾಹನ ನೋಂದಣಿಗೆ 2 ಕೋಟಿ ರೂ. ದಂಡ ಸಂಗ್ರಹ
Author: Savina Naik
Posted By: Savina Naik
Updated: Apr 9, 2026 | 1:38 PM

ಕಲಬುರಗಿ: ವಾಹನ ತೆರಿಗೆ ಕಡಿಮೆ ಆಗುತ್ತದೆ ಎಂದು ದೂರದ ಪುದುಚೇರಿಯಲ್ಲಿ  ನೋಂದಣಿ ಮಾಡಿದ ವಾಹನ ಮಾಲೀಕರಿಗೆ ಸಾರಿಗೆ ಇಲಾಖೆ ಅಧಿಕಾರಿಗಳು  ಕಳೆದೊಂದು ವರ್ಷದಲ್ಲಿ ಜಿಲ್ಲೆಯಲ್ಲಿ 1.98 ಕೋಟಿ ರೂ. ತೆರಿಗೆ ಹಾಗೂ ದಂಡ ಸಂಗ್ರಹ ಮಾಡಿದ್ದಾರೆ.

ಪುದುಚೇರಿಗೆ ಹೋಲಿಸಿದರೆ ಕರ್ನಾಟಕದಲ್ಲಿ ನಾಲ್ಕು ಚಕ್ರ ವಾಹನಗಳ ರಸ್ತೆ ತೆರಿಗೆ ಹೆಚ್ಚಿರುವ ಹಿನ್ನೆಲೆಯಲ್ಲಿ ಹಲವರು ತಮ್ಮ ವಾಹನಗಳನ್ನು ಅಲ್ಲಿ ನೋಂದಣಿ ಮಾಡಿ ರಾಜ್ಯ ತೆರಿಗೆ ಸಂಗ್ರಹಕ್ಕೆ ಕೊಕ್ಕೆ ಹಾಕುತ್ತಿದ್ದಾರೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಸಾರಿಗೆ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದೆ.

ಕಲಬುರಗಿಯಲ್ಲಿ ಅಂತಹ 92 ವಾಹನಗಳ ಮಾಲೀಕರ ವಿರುದ್ಧ ಕಳೆದ ವರ್ಷ ಪ್ರಕರಣ ದಾಖಲಿಸಿ, ಒಟ್ಟು 1.98ಕೋಟಿ ರೂ. ದಂಡ ಮತ್ತು ತೆರಿಗೆ ಸಂಗ್ರಹ ಮಾಡಲಾಗಿದೆ.

ಕರ್ನಾಟಕ ರಾಜ್ಯದಲ್ಲಿ ವಾಹನಗಳ ಮೇಲೆ ವಿಧಿಸುವ ತೆರಿಗೆ ಸುಮಾರು ಶೇ.13ರಿಂದ 20ರವರೆಗೆ ಇದೆ. ಆದರೆ ಪುದುಚೇರಿಯಲ್ಲಿ ಇದೇ ವಾಹನಗಳಿಗೆ ಕಡಿಮೆ ಪ್ರಮಾಣದ ತೆರಿಗೆ ವಿಧಿಸಲಾಗುತ್ತದೆ. ಈ ಹಿನ್ನೆಲೆ ಲಕ್ಷಾಂತರ ರೂ. ದುಬಾರಿ ಕಾರ್ ಕೊಳ್ಳುವಾಗ ಹೆಚ್ಚಿನ ಹಣ ಉಳಿಯುತ್ತದೆ ಎಂದು ಪುದುಚೇರಿಯಲ್ಲಿ ಮಾಲೀಕರು ವಾಹನ ಖರೀದಿಸುತ್ತಿದ್ದಾರೆ.