S Shorts

ಅಣ್ಣನಿಂದಲೇ ತಂಗಿಗೆ sexual Assault: ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!

ಅಣ್ಣನಿಂದಲೇ ತಂಗಿಗೆ sexual Assault: ಹೆಣ್ಣು ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ!
Author: Meghana Gowda
Posted By: Meghana Gowda
Updated: Nov 6, 2025 | 10:32 AM

ಕೊಪ್ಪಳ:  ಅಣ್ಣ- ತಂಗಿ ಸಂಬಂಧ ಎಂದರೇ, ತಂಗಿಯ ಶ್ರೀರಕ್ಷೆಗಾಗಿ ಅಣ್ಣನಾದವನು ಸದಾಕಾಲ ಬೆಂಗಾವಲಾಗಿ ಇರುವಂತಹವನು ಎಂದರ್ಥ. ಆದರೆ ಕೊಪ್ಪಳ (Koppal) ಜಿಲ್ಲೆಯಲ್ಲಿ ಇಡೀ ಸಮಾಜವನ್ನೇ  ತಲೆತಗ್ಗಿಸುವಂತಹ ಘಟನೆ  ಕಂಡು ಬಂದಿದೆ.

ಅಪ್ರಾಪ್ತ ತಂಗಿಗೆ ಮದುವೆಯ ಆಮಿಷವೊಡ್ಡಿ, ಆಕೆಯ ಮೇಲೆ  ದೈಹಿಕ ದೌರ್ಜನ್ಯ (sexual assault)ಎಸಗಿದ ಕೃತ್ಯದಿಂದ ಆಕೆ ಗರ್ಭಿಣಿ (pregnant) ಯಾಗಿದ್ದಾಳೆ.

ಇತ್ತೀಚೆಗೆ ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಕುಟುಂಬಸ್ಥರು ಅಪ್ರಾಪ್ತ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ವೈದ್ಯಕೀಯ ತಪಾಸಣೆ ವೇಳೆ ಬಾಲಕಿ ಗರ್ಭಿಣಿ ಎಂಬ ವಿಷಯ ತಿಳಿದುಬಂದಿದ್ದು, ಕೆಲವೇ ಗಂಟೆಗಳಲ್ಲಿ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ವಿಚಾರಣೆ ವೇಳೆ ಸ್ವಂತ ಅಣ್ಣನೇ ದೌರ್ಜನ್ಯ ಎಸಗಿದ್ದಾನೆ. ಯಾರಿಗಾದರು ಹೇಳಿದರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ತಾನು ಮೌನವಾಗಿದ್ದೆ ಎಂದು ಸಂತ್ರಸ್ತೆ ತಿಳಿಸಿದ್ದಾಳೆ.

ವಿಷಯ ತಿಳಿದ ಕೂಡಲೇ ಪೊಲೀಸರು ಆರೋಪಿ ಅಣ್ಣನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಘಟನೆ ಜಿಲ್ಲೆಯಲ್ಲಿ ತೀವ್ರ ಆಘಾತ ಮತ್ತು ಖಂಡನೆಗೆ ಕಾರಣವಾಗಿದೆ.