ಕೋಲಾರ: ಜಿಲ್ಲೆಯ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯು ಪ್ರಾಣಿ ಕಲ್ಯಾಣ ಮತ್ತು ಸಾರ್ವಜನಿಕ ನೈರ್ಮಲ್ಯದ ದೃಷ್ಟಿಯಿಂದ ಒಂದು ಮಾದರಿ ಹೆಜ್ಜೆಯನ್ನು ಇಟ್ಟಿದೆ. ಪಟ್ಟಣದಾದ್ಯಂತ ಬೀದಿ ನಾಯಿಗಳಿಗೆ ಆಹಾರ ಮತ್ತು ನೀರು ಒದಗಿಸಲು ನಿರ್ದಿಷ್ಟ ‘ಫೀಡಿಂಗ್ ಜೋನ್’ಗಳನ್ನು (ಆಹಾರ ನೀಡುವ ಸ್ಥಳ) ನಿರ್ಮಿಸಲಾಗಿದೆ.
ನಗರಸಭೆವತಿಯಿಂದ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗಾಗಿ ೪೨ ಲಕ್ಷ ಅನುದಾನವನ್ನು ಮೀಸಲಿಡಲಾಗಿದೆ ಹಾಗೂ ಬೀದಿ ನಾಯಿಗಳ ಹಾರೈಕೆಗಾಗಿ ೩೫ ವಾರ್ಡ್‌ಗಳಲ್ಲಿ ಫೀಡಿಂಗ್ ಸೆಂಟರ್‌ಗಳನ್ನು ಪ್ರಾರಂಭಿಸಲಾಗಿದೆ
ಬೀದಿ ನಾಯಿಗಳ ಹಾರೈಕೆಗಾಗಿ ಫೀಡಿಂಗ್ ಸೆಂಟರ್‌ಗಳನ್ನು ಪ್ರಾರಂಭಿಸಲಾಗಿದೆ ಫೀಡಿಂಗ್ ಸೆಂಟರ್‌ಗಳಲ್ಲಿ ಪ್ರತಿ ನಿತ್ಯ ಹಾಲು ಹಾಗೂ ಬಿಸ್ಕೇಟ್‌ಗಳನ್ನು ಹಾಕಲಾಗುತ್ತಿದೆ ಮಾನವೀಯತೆ ದೃಷ್ಠಿಯಿಂದ ಪ್ರಾಣಿ ಪ್ರೀಯರ ಸಲಹೆಗಳನ್ನು ಹಾಗೂ ಶಾಸಕರ ಅಭಿಪ್ರಾಯಗಳನ್ನು ಪಡೆದು ಫೀಡಿಂಗ್ ಸೆಂಟರ್‌ಗಳನ್ನು ಪ್ರಾರಂಭಿಸಲಾಗಿದೆ.
ರಸ್ತೆಯಲ್ಲಿ ಒಡಾಟ ನಡೆಸುವವರ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಿದ್ದರಿಂದ ಖಾಸಗಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿದ್ದರಿಂದ ರಾಜ್ಯದ ಎಲ್ಲಾ ನಗರಗಳಲ್ಲಿರುವ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡುವಂತೆ ಆದೇಶ ನೀಡಿರುವ ಹಿನ್ನಲೆಯಲ್ಲಿ ನಗರದ ೩೫ ವಾರ್ಡ್‌ಗಳಲ್ಲಿರುವ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗಾಗಿ ೪೨ ಲಕ್ಷ ಅನುದಾನವನ್ನು ಮೀಸಡಲಿಡಲಾಗಿದ್ದು ಸಂತಾನ ಹರಣ ಮಾಡಲು ತಜ್ಞ ಕಂಪನಿಗೆ ಟೆಂಡರ್ ನೀಡಲಾಗಿದ್ದು ಅರು ಈಗಾಗಲೇ ಸಂತಾನ ಹರಣ ಚಿಕಿತ್ಸೆಯನ್ನು ಮಾಡುತ್ತಿದ್ದಾರೆ.
ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕೋಲಾರ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಸಂತಾನಶಕ್ತಿ ಹರಣ ಚಿಕಿತ್ಸೆ (ABC) ಮತ್ತು ಲಸಿಕೆ ಹಾಕುವ ಕಾರ್ಯಕ್ರಮವನ್ನೂ ಸಮಾನಾಂತರವಾಗಿ ಹಮ್ಮಿಕೊಂಡಿದೆ.
