S Shorts

ಬ್ಯಾನರ್ ಹರಿದ ಆರೋಪ; ಪೊಲೀಸ್ ದೂರಿನ ಭಯಕ್ಕೆ ಚಾಲಕ ಆತ್ಮಹತ್ಯೆ!

ಬ್ಯಾನರ್ ಹರಿದ ಆರೋಪ; ಪೊಲೀಸ್ ದೂರಿನ ಭಯಕ್ಕೆ ಚಾಲಕ ಆತ್ಮಹತ್ಯೆ!
Author: Sagaradventure
Posted By: Sagaradventure
Updated: Aug 3, 2026 | 12:39 PM

ಬೆಂಗಳೂರು: ಬ್ಯಾನರ್ ಹರಿದು ಹಾಕಿದ್ದಾನೆ ಎಂಬ ಆರೋಪ ಮತ್ತು ಪೊಲೀಸ್ ದೂರಿನ ಭಯದಿಂದ ಯುವಕನೊಬ್ಬ ಆತ್ಮಹ*ತ್ಯೆಗೆ ಶರಣಾಗಿರುವ ದಾರುಣ ಘಟನೆ ಬೊಮ್ಮನಹಳ್ಳಿಯ ರೂಪೇನ ಅಗ್ರಹಾರ ಬಳಿಯ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದಿದೆ. ಮೃ*ತನನ್ನು ಚಾಲಕ ವೃತ್ತಿ ಮಾಡುತ್ತಿದ್ದ ಶಿವಕುಮಾರ್ ಎಂದು ಗುರುತಿಸಲಾಗಿದೆ. ನಿನ್ನೆ ಬೆಳಿಗ್ಗೆ ತಮ್ಮ ಮನೆಯ ಮಹಡಿಯ ರೂಮಿನಲ್ಲಿ ಶಿವಕುಮಾರ್ ಆತ್ಮಹ*ತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕೆಲವು ದಿನಗಳ ಹಿಂದೆ ಸ್ಥಳೀಯ ಸರ್ಕಲ್ ಒಂದರಲ್ಲಿ ಅಯ್ಯಪ್ಪ ಎಂಬ ವ್ಯಕ್ತಿ ಬ್ಯಾನರ್ ಒಂದನ್ನು ಅಳವಡಿಸಿದ್ದ. ಆ ಬ್ಯಾನರ್ ಅನ್ನು ಯಾರೋ ಹರಿದು ಹಾಕಿದ್ದಕ್ಕೆ ಶಿವಕುಮಾರ್ ಅವರೇ ಕಾರಣ ಎಂದು ಆರೋಪಿಸಿದ್ದ ಅಯ್ಯಪ್ಪ, ಆತನಿಗೆ ಆವಾಜ್ ಹಾಕಿದ್ದ ಎನ್ನಲಾಗಿದೆ. ಅಲ್ಲದೆ ಈ ಕುರಿತು ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿ, ಕೇಸ್ ಬೇಡ ಎಂದರೆ ಹಣ ನೀಡಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಇದರಿಂದ ತೀವ್ರ ಭೀತಿಗೊಳಗಾದ ಶಿವಕುಮಾರ್ 3 ದಿನಗಳ ಕಾಲ ಮನೆ ಬಿಟ್ಟು ತೆರಳಿದ್ದರು.

ಇದೇ ಸಮಯದಲ್ಲಿ ಪೊಲೀಸರು ಕೂಡ ವಿಚಾರಣೆಗಾಗಿ ಶಿವಕುಮಾರ್ ಮನೆಗೆ ಬಂದು ಹೋಗಿದ್ದರೆನ್ನಲಾಗಿದೆ. ಬಳಿಕ ಮನೆಗೆ ವಾಪಸಾದ ಶಿವಕುಮಾರ್ ಊಟ ಮಾಡಿ ಮಹಡಿಯ ಕೋಣೆಗೆ ತೆರಳಿದ್ದರು. ಬೆಳಿಗ್ಗೆ ತಾಯಿ ಮಹಡಿಗೆ ಹೋದಾಗ ಆತ್ಮಹ*ತ್ಯೆ ಕೃತ್ಯ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ (UDR) ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.