S Shorts

Auntyಯಾ ಕಾಮದಾಟಕ್ಕೆ ಬಲಿಯಾದ19 ವರ್ಷದ ಯುವಕ?

Auntyಯಾ ಕಾಮದಾಟಕ್ಕೆ ಬಲಿಯಾದ19 ವರ್ಷದ ಯುವಕ?
Author: Meghana Gowda
Posted By: Meghana Gowda
Updated: Nov 5, 2025 | 8:13 AM

Chintamaniಚಿಕ್ಕಬಳ್ಳಾಪುರ : 38 ವರ್ಷದ ಮಹಿಳೆಯೊಬ್ಬಳ ಲೈಂಗಿಕ ಪ್ರಚೋದನೆ(sexual-harassment)ಯನ್ನು ತಾಳಲಾರದೆ 19 ವರ್ಷದ ಯುವಕ ನೇಣಿಗೆ ಶರಣಾದ ಘಟನೆ ಚಿಂತಾಮಣಿ (Chintamani) ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಮೃತ ಯುವಕನನ್ನು ನಿಕಿಲ್ ಕುಮಾರ್ (19) ಎಂದು ಗುರುತಿಸಲಾಗಿದ್ದು, ಶವವು ಚಿಂತಾಮಣಿಯ ಕಾಚಹಳ್ಳಿ ಕೆರೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಈತ ಮೂಡಚಿಂತಲಹಳ್ಳಿ ಗ್ರಾಮದ 38 ವರ್ಷದ ಶಾರದ (Sharada)ಎಂಬುವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು. ಶಾರದ ಹಲವು ವರ್ಷಗಳ ಹಿಂದೆ ಪತಿಗೆ ವಿಚ್ಛೇದನ ನೀಡಿ ಇಬ್ಬರು ಮಕ್ಕಳೊಂದಿಗೆ ಇದೇ ಗ್ರಾಮದಲ್ಲಿ ವಾಸವಿದ್ದರು.

ಇವರಿಬ್ಬರ ಅಕ್ರಮ ಸಂಬಂಧ ನಿಕಿಲ್ ಪೋಷಕರಿಗೆ ತಿಳಿದಿದ್ದು, ಹಲವು ಬಾರಿ  ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ, ಶಾರದ ಯುವಕನನ್ನು ಬಿಡದೇ ನಿರಂತರವಾಗಿ ಲೈಂಗಿಕವಾಗಿ ಪ್ರಚೋದಿಸುತ್ತಿದ್ದರು. ಅಲ್ಲದೆ, ಪೋಷಕರ ಕಣ್ತಪ್ಪಿಸಿ ಕಾರಿನ ಡಿಕ್ಕಿಯಲ್ಲಿ ಯುವಕನನ್ನು ಹೊರಗಡೆ ಕರೆದೊಯ್ಯುತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಇದಲ್ಲದೇ ಆತನನ್ನು ಕೆಲವು ಕಳ್ಳತನ ಪ್ರಕರಣಗಳಲ್ಲಿ ಸಹ ತೊಡಗಿಸುತ್ತಿದ್ದಳು ಮತ್ತು ತಮ್ಮ ಮಗನ ಸಾವಿಗೆ ಶಾರದ ಅವರೇ ಕಾರಣ ಎಂದು ಆರೋಪಿಸಿ ಮೃತ ಯುವಕನ ಪೋಷಕರು ಶಾರದ ವಿರುದ್ಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಸ್ತುತ, ಚಿಂತಾಮಣಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮಹಿಳೆ ಶಾರದ ಅವರ ಪಾತ್ರದ ಕುರಿತು ತನಿಖೆಯನ್ನು ಮುಂದುವರೆಸಿದ್ದಾರೆ.