S Shorts

ಬೆಂಗಳೂರು-ಮೈಸೂರು Expressway ವಾಹನ ಸವಾರರಿಗೆ ಶಾಕ್: ಟೋಲ್ ದರ ಪರಿಷ್ಕರಣೆ

ಬೆಂಗಳೂರು-ಮೈಸೂರು Expressway ವಾಹನ ಸವಾರರಿಗೆ ಶಾಕ್: ಟೋಲ್ ದರ ಪರಿಷ್ಕರಣೆ
Author: Sagaradventure
Posted By: Sagaradventure
Updated: Jul 23, 2026 | 10:42 AM

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದೆ. ಕಣಮಿಣಕೆ ಟೋಲ್‌ನಿಂದ ನಿಡಘಟ್ಟ ಕಡೆಗೆ ಹಾಗೂ ಗಣಂಗೂರು ಟೋಲ್‌ನಿಂದ ನಿಡಘಟ್ಟ ಕಡೆಗೆ ಸಂಚರಿಸುವ ವಾಹನಗಳಿಗೆ ಅನ್ವಯವಾಗುವಂತೆ ಕನಿಷ್ಠ 5 ರೂಪಾಯಿಯಿಂದ 35 ರೂಪಾಯಿವರೆಗೆ ಟೋಲ್ ದರವನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.

ಪರಿಷ್ಕೃತ ಟೋಲ್ ದರಗಳ ವಿವರ

ವಿವಿಧ ವಾಹನಗಳಿಗೆ ಅನ್ವಯವಾಗುವಂತೆ ಪರಿಷ್ಕೃತಗೊಂಡಿರುವ ಏಕಮುಖ ಸಂಚಾರದ ಹೊಸ ದರಗಳ ಪಟ್ಟಿ ಈ ಕೆಳಗಿನಂತಿದೆ:

ವಾಹನದ ವಿಧ ಹಳೆಯ ದರ (ರೂ.) ಹೊಸ ದರ (ರೂ.)
ಕಾರು, ವ್ಯಾನ್, ಜೀಪ್ 180 185
ಲಘು ವಾಣಿಜ್ಯ ವಾಹನ, ಮಿನಿ ಬಸ್ 285 295
ಟ್ರಕ್, ಬಸ್ 600 620
ಭಾರಿ ಕಟ್ಟಡ ನಿರ್ಮಾಣ ವಾಹನ (4/6 ಆಕ್ಸೆಲ್) 940 970

ವಾಹನ ಸವಾರರ ಆಕ್ರೋಶ

ಈ ಏಕಮುಖ ಸಂಚಾರದ ದರಗಳ ಜೊತೆಗೆ ಮಾಸಿಕ ಪಾಸ್ ಹಾಗೂ ಒಂದೇ ದಿನದ ಮರುಸಂಚಾರ ದರಗಳನ್ನು ಸಹ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಷ್ಕರಿಸಿದೆ. ದಶಪಥ ರಸ್ತೆಯಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ಟೋಲ್ ದರ ಹೆಚ್ಚಳ ಮಾಡಿರುವ ಪ್ರಾಧಿಕಾರದ ಕ್ರಮಕ್ಕೆ ವಾಹನ ಸವಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪದೇ ಪದೇ ಆಗುತ್ತಿರುವ ಈ ಹೊರೆಯ ವಿರುದ್ಧ ಕಿಡಿಕಾರಿದ್ದಾರೆ.