S Shorts

Bus Accident ನಲ್ಲಿ ಭಟ್ಕಳ ಮೂಲದ ಯುವತಿ ನಾಪತ್ತೆ!!

Bus Accident ನಲ್ಲಿ ಭಟ್ಕಳ ಮೂಲದ ಯುವತಿ ನಾಪತ್ತೆ!!
Author: Meghana Gowda
Posted By: Meghana Gowda
Updated: Dec 25, 2025 | 5:04 AM

ಬೆಂಗಳೂರು/ಭಟ್ಕಳ: ಕ್ರಿಸ್‌ಮಸ್ ರಜೆ ಹಿನ್ನೆಲೆಯಲ್ಲಿ ಗೆಳತಿಯರೊಂದಿಗೆ ಗೋಕರ್ಣ ಪ್ರವಾಸಕ್ಕೆ ತೆರಳಿದ್ದ ಭಟ್ಕಳ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ರಶ್ಮಿ ಮಹಾಲೆ ಅವರು ಭೀಕರ ಬಸ್ ದುರಂತದ ಬಳಿಕ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿ, ಪ್ರವಾಸಕ್ಕಾಗಿ ಪಟ್ಟು ಹಿಡಿದು ರಜೆ ಪಡೆದು ಹೊರಟಿದ್ದರು ಎನ್ನಲಾಗಿದೆ.

ನಾಲ್ಕು ದಿನಗಳ ಪ್ರವಾಸದ ಹಿನ್ನೆಲೆಯಲ್ಲಿ ರಶ್ಮಿ ಅವರು ಸೋಮವಾರದವರೆಗೆ ರಜೆ ನೀಡುವಂತೆ ಮ್ಯಾನೇಜರ್ ಬಳಿ ಕೇಳಿದ್ದರು. ಮೊದಲು ರಜೆ ನೀಡಲು ನಿರಾಕರಿಸಿದ್ದ ಮ್ಯಾನೇಜರ್ ಬಳಿ ಹಠ ಮಾಡಿ ರಜೆ ಮಂಜೂರು ಮಾಡಿಸಿಕೊಂಡಿದ್ದರು. ಅದರಂತೆ ನಿನ್ನೆ ಸಂಜೆ ಕೆಲಸ ಮುಗಿಸಿ ಇಬ್ಬರು ಸ್ನೇಹಿತೆಯರೊಂದಿಗೆ ಗೋಕರ್ಣದತ್ತ ಪ್ರಯಾಣ ಬೆಳೆಸಿದ್ದರು. ಇದರಲ್ಲಿ ಇಬ್ಬರು ಯುವತಿಯರಾದ ಗಗನ ಮತ್ತು ರಕ್ಷಿತಾ ಗ್ರೇಟ್​ ಎಸ್ಕೇಪ್​ ಆಗಿದ್ದು, ಮತ್ತೊಬ್ಬ ಯುವತಿಯಾದ ರಶ್ಮಿ ಸಂಪರ್ಕವೇ ಸಿಗುತ್ತಿಲ್ಲ ಎನ್ನಲಾಗಿದೆ.

ಇದನ್ನೂ ಓದಿ:

ಆದರೆ ದುರದೃಷ್ಟವಶಾತ್ ಸಂಭವಿಸಿದ ಬಸ್ ಅಪಘಾತದ ನಂತರ ರಶ್ಮಿ ಮಹಾಲೆ ಅವರ ಪತ್ತೆಯಿಲ್ಲದಂತಾಗಿದೆ. ಅವರ ಜೊತೆಗಿದ್ದ ಇಬ್ಬರು ಸ್ನೇಹಿತೆಯರು ಪ್ರಾಣಾಪಾಯದಿಂದ ಪಾರಾಗಿ ಸುರಕ್ಷಿತವಾಗಿದ್ದಾರೆ. ಸದ್ಯ ರಶ್ಮಿ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಯಾವುದೇ ಸಂಪರ್ಕ ಸಿಗುತ್ತಿಲ್ಲ. ವಿಷಯ ತಿಳಿದು ಆತಂಕಗೊಂಡಿರುವ ಕುಟುಂಬಸ್ಥರು ಮತ್ತು ಪೊಲೀಸರು ರಶ್ಮಿ ಪತ್ತೆಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.