S Shorts

ಹಾಲಿನ ದರ ಏರಿಕೆ ಎಫೆಕ್ಟ್: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ದಿಢೀರ್ 5 ರೂ. ಹೆಚ್ಚಳ!

ಹಾಲಿನ ದರ ಏರಿಕೆ ಎಫೆಕ್ಟ್: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ದಿಢೀರ್ 5 ರೂ. ಹೆಚ್ಚಳ!
Author: Sagaradventure
Posted By: Sagaradventure
Updated: Nov 2, 2026 | 10:27 AM

ಬೆಂಗಳೂರು: ಕೆಎಂಎಫ್ (KMF) ಹಾಲಿನ ದರ ಹೆಚ್ಚಳ ಮಾಡಿದ ಬೆನ್ನಲ್ಲೇ, ರಾಜ್ಯಾದ್ಯಂತ ಕಾಫಿ ಮತ್ತು ಟೀ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಹೋಟೆಲ್‌ಗಳು, ದರ್ಶಿನಿಗಳು ಹಾಗೂ ಟೀ ಸ್ಟಾಲ್‌ಗಳಲ್ಲಿ ಒಂದು ಕಪ್ ಕಾಫಿ ಹಾಗೂ ಟೀ ಬೆಲೆಯನ್ನು ಏಕಾಏಕಿ 5 ರೂ.ಗಳಷ್ಟು ಹೆಚ್ಚಿಸಲಾಗಿದ್ದು, ಇಂದಿನಿಂದಲೇ (ನವೆಂಬರ್ 2) ಪರಿಷ್ಕೃತ ದರ ಜಾರಿಗೆ ಬಂದಿದೆ.

ಹೊಸ ದರಗಳೆಷ್ಟು?: 

ಹಾಲಿನ ದರ ಏರಿಕೆಯಿಂದಾಗಿ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಕಾಫಿ ಮತ್ತು ಟೀ ಬೆಲೆಯನ್ನು ಪರಿಷ್ಕರಿಸಿದ್ದಾರೆ. ಪರಿಣಾಮವಾಗಿ, ಈ ಹಿಂದೆ 15 ರೂಪಾಯಿ ಇದ್ದ ಮಿನಿ ಕಾಫಿ ಮತ್ತು ಟೀ ಬೆಲೆ ಇದೀಗ 20 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ, 20 ರೂಪಾಯಿ ಇದ್ದ ಒಂದು ಫುಲ್ ಕಪ್ ಕಾಫಿ ಅಥವಾ ಟೀ ಬೆಲೆ 25 ರೂಪಾಯಿಗೆ ತಲುಪಿದೆ.

ಗ್ರಾಹಕರಿಗೆ ನುಂಗಲಾರದ ತುತ್ತು: 

ಚಳಿಗಾಲ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಬಿಸಿ ಬಿಸಿ ಕಾಫಿ-ಟೀ ಕುಡಿಯಲು ಹೋಟೆಲ್‌ಗೆ ತೆರಳುವ ಸಾಮಾನ್ಯ ಜನರಿಗೆ ಈ ದಿಢೀರ್ ದರ ಹೆಚ್ಚಳ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹಾಲಿನ ದರ ಏರಿಕೆಯಾದ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಹೊರೆಯಾದರೂ ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಹೋಟೆಲ್ ಮಾಲೀಕರ ಸಂಘ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದೆ.