S Shorts

ಸತತ ಎರಡನೇ ತಿಂಗಳು ವಾಣಿಜ್ಯ LPG ಸಿಲಿಂಡರ್ ಬೆಲೆ ಇಳಿಕೆ; ಬೆಂಗಳೂರಿನಲ್ಲಿ 2,821 ರೂ.ಗೆ ಲಭ್ಯ

ಸತತ ಎರಡನೇ ತಿಂಗಳು ವಾಣಿಜ್ಯ LPG ಸಿಲಿಂಡರ್ ಬೆಲೆ ಇಳಿಕೆ; ಬೆಂಗಳೂರಿನಲ್ಲಿ 2,821 ರೂ.ಗೆ ಲಭ್ಯ
Author: Sagaradventure
Posted By: Sagaradventure
Updated: Aug 2, 2026 | 10:26 AM

ನವದೆಹಲಿ: ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರ ಸಣ್ಣಪುಟ್ಟ ಉದ್ಯಮಿಗಳಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದ್ದು, ಸತತ ಎರಡನೇ ತಿಂಗಳು ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಗಣನೀಯ ಇಳಿಕೆ ಮಾಡಿದೆ. 

ಶನಿವಾರ ತಡರಾತ್ರಿಯಿಂದಲೇ ಅನ್ವಯವಾಗುವಂತೆ ನೂತನ ದರಗಳು ಜಾರಿಗೆ ಬಂದಿದ್ದು, ವಾಣಿಜ್ಯ ಸಿಲಿಂಡರ್ ದರವನ್ನು ದೆಹಲಿಯಲ್ಲಿ 202 ರೂಪಾಯಿ ಹಾಗೂ ಕೋಲ್ಕತ್ತಾದಲ್ಲಿ 209 ರೂಪಾಯಿಗಳಷ್ಟು ಕಡಿತಗೊಳಿಸಿ ತೈಲ ಮಾರುಕಟ್ಟೆ ಕಂಪನಿಗಳು ಆದೇಶ ಹೊರಡಿಸಿವೆ.

ಬೆಲೆ ಇಳಿಕೆಯ ನಂತರ ದೇಶದ ಪ್ರಮುಖ ನಗರಗಳಲ್ಲಿನ ವಾಣಿಜ್ಯ ಸಿಲಿಂಡರ್ ದರಗಳಲ್ಲಿ ಬದಲಾವಣೆಯಾಗಿದೆ. ತಾಜಾ ಪರಿಷ್ಕರಣೆಯ ಅನ್ವಯ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,728 ರೂಪಾಯಿಗಳಿಗೆ ನಿಗದಿಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ 2,872.50 ರೂಪಾಯಿ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 2,821 ರೂಪಾಯಿಗಳಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. 

ಈ ಹಿಂದಿನ ಜುಲೈ ತಿಂಗಳಿನಲ್ಲಿಯೂ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 183.50 ರೂಪಾಯಿಗಳಷ್ಟು ಇಳಿಕೆ ಮಾಡಲಾಗಿತ್ತು. ಸತತ ಎರಡು ತಿಂಗಳುಗಳಿಂದ ಆಗುತ್ತಿರುವ ಈ ದರ ಕಡಿತವು ವಾಣಿಜ್ಯ ಗ್ಯಾಸ್ ಬಳಕೆದಾರರ ಆರ್ಥಿಕ ಹೊರೆಯನ್ನು ಕೊಂಚ ಮಟ್ಟಿಗೆ ತಗ್ಗಿಸಿದೆ.