S Shorts

ದೆಹಲಿ ಪೊಲೀಸರಿಗೆ NSA ಅಡಿ ವಿಶೇಷ ಬಂಧನ ಅಧಿಕಾರ: ಕೇಂದ್ರದ ನಡೆಗೆ ತೀವ್ರ ಆಕ್ರೋಶ

ದೆಹಲಿ ಪೊಲೀಸರಿಗೆ NSA ಅಡಿ ವಿಶೇಷ ಬಂಧನ ಅಧಿಕಾರ: ಕೇಂದ್ರದ ನಡೆಗೆ ತೀವ್ರ ಆಕ್ರೋಶ
Author: Sagaradventure
Posted By: Sagaradventure
Updated: Jul 23, 2026 | 3:36 PM

ಕೇಂದ್ರ ಸರ್ಕಾರವು ದೆಹಲಿ ಪೊಲೀಸ್ ಆಯುಕ್ತರಿಗೆ ‘ರಾಷ್ಟ್ರೀಯ ಭದ್ರತಾ ಕಾಯ್ದೆ’ (NSA) ಅಡಿಯಲ್ಲಿ ವಿಶೇಷ ಬಂಧನ ಅಧಿಕಾರವನ್ನು ಪ್ರದಾನ ಮಾಡಿದೆ. ಜುಲೈ 15ರಂದೇ ಈ ಕುರಿತು ಆದೇಶ ಹೊರಡಿಸಲಾಗಿದ್ದು, ಜುಲೈ 19 ರಿಂದ ಅಕ್ಟೋಬರ್ 18 ರವರೆಗೆ (ಒಟ್ಟು 3 ತಿಂಗಳ ಕಾಲ) ಈ ಕಾನೂನು ಜಾರಿಯಲ್ಲಿರುತ್ತದೆ. 

ಈ ವಿಶೇಷ ಅಧಿಕಾರದ ಅನ್ವಯ, ಯಾವುದೇ ವಿಚಾರಣೆ ಅಥವಾ ಔಪಚಾರಿಕ ಆರೋಪಗಳಿಲ್ಲದೆ ವ್ಯಕ್ತಿಗಳನ್ನು 12 ದಿನಗಳಿಂದ ಗರಿಷ್ಠ 12 ತಿಂಗಳವರೆಗೆ ಬಂಧನದಲ್ಲಿ ಇಡಬಹುದಾಗಿದೆ.

ಸದ್ಯ ದೇಶಾದ್ಯಂತ ನಡೆಯುತ್ತಿರುವ ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಕೇಂದ್ರವು ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಸರ್ಕಾರದ ವಿರುದ್ಧ ಪ್ರತಿಭಟಿಸುವವರ ಧ್ವನಿಯನ್ನು ಹತ್ತಿಕ್ಕುವ ಉದ್ದೇಶದಿಂದಲೇ ಈ ಕಠಿಣ ಕಾನೂನನ್ನು ಜಾರಿಗೊಳಿಸಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. 

ಕೇಂದ್ರ ಸರ್ಕಾರದ ಈ ದಿಢೀರ್ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರು ಹಾಗೂ ಹೋರಾಟಗಾರರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.