ನವದೆಹಲಿ: ಮಹಾ ಕುಂಭಮೇಳದಲ್ಲಿ ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮ ತಾರೆಯಾಗಿದ್ದ ಮೊನಾಲಿಸಾ ಭೋಸ್ಲೆ ಕಳೆದ ಕೆಲವು ದಿನಗಳಿಂದ ಅವರು ಕಾಣೆಯಾಗಿದ್ದಾರೆ ಎಂದು ಪತಿ ಫರ್ಮಾನ್ ಖಾನ್ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಫರ್ಮಾನ್ ಅವರು ರಾಜಸ್ಥಾನದ ಅಜ್ಮೀರ್ ಮತ್ತು ಪುಷ್ಕರ್ ಪ್ರವಾಸದ ಸಮಯದಲ್ಲಿ ಮೊನಾಲಿಸಾ ನಾಪತ್ತೆಯಾಗಿದ್ದಾರೆ. ನಾನು ಅವಳಿಗಾಗಿ ಅಜ್ಮೀರ್‌ನಾದ್ಯಂತ ಹುಡುಕಿದೆ, ಈಗ ನಾನು ಜೋಧ್‌ಪುರಕ್ಕೆ ಹೋಗುತ್ತಿದ್ದೇನೆ” ಎಂದು ಮೋನಾಲಿಸಾ ಪತಿ ಫರ್ಮಾನ್ ಖಾನ್ ಸೆಲ್ಫಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಈ ಕಣ್ಮರೆಯ ಹಿಂದೆ ಬಲವಾದ ಕಾರಣಗಳಿವೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ (ಎನ್‌ಸಿಎಸ್‌ಟಿ) ನಡೆಸಿದ ತನಿಖೆಯಲ್ಲಿ ಮೊನಾಲಿಸಾ ಮೇಜರ್ ಅಲ್ಲ ಮತ್ತು ಕೇವಲ 16 ವರ್ಷ ವಯಸ್ಸಿನವಳು ಎಂದು ತಿಳಿದುಬಂದಿದೆ. ಸುಳ್ಳು ಪ್ರಮಾಣಪತ್ರಗಳೊಂದಿಗೆ ಅವಳನ್ನು ಮದುವೆಯಾದ ಆರೋಪದ ಮೇಲೆ ಮಧ್ಯಪ್ರದೇಶ ಪೊಲೀಸರು ಈಗಾಗಲೇ ಫರ್ಮಾನ್ ಖಾನ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಮೊನಾಲಿಸಾಳ ಪೋಷಕರು ಫರ್ಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ತಮ್ಮ ಮಗಳ ನಾಪತ್ತೆಯ ಹಿಂದೆ ಫರ್ಮಾನ್ ಕೈವಾಡವಿದೆ ಮತ್ತು ಪೊಲೀಸ್ ತನಿಖೆಯಿಂದ ತಪ್ಪಿಸಿಕೊಳ್ಳಲು ಅವನು ಇಂತಹ ನಾಟಕಗಳನ್ನು ಆಡುತ್ತಿದ್ದಾನೆ ಎಂದು ಅವರು ಹೇಳುತ್ತಿದ್ದಾರೆ. ಕಳೆದ 15-20 ದಿನಗಳಿಂದ ತಮ್ಮ ಮಗಳೊಂದಿಗೆ ಮಾತನಾಡದಿರುವ ಬಗ್ಗೆ ಅವರು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
