ಬೆಂಗಳೂರು: ಮಾಜಿ ಸಚಿವ ಡಾ.ಸಿ. ಎನ್. ಅಶ್ವಥ್ ನಾರಾಯಣ ಅವರ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ವೆಂಕಟೇಶ್ (45) (Venkatesh) ಅವರು ಆತ್ಮಹತ್ಯೆ (suicide) ಗೆ ಶರಣಾಗಿದ್ದಾರೆ. ಬೆಂಗಳೂರಿನ ವೈಯ್ಯಾಲಿಕಾವಲ್ (Vyalikaval ) ನಲ್ಲಿರುವ ತಮ್ಮ ಕಚೇರಿಯಲ್ಲೇ ವೆಂಕಟೇಶ್ ಅವರು ನೇಣಿಗೆ ಶರಣಾಗಿದ್ದು, ಸಾಯುವ ಮುನ್ನಾ ವಿಡಿಯೋ ಮಾಡಿ ಸಾವನ್ನಪ್ಪಿದ್ದಾರೆ.
ವೆಂಕಟೇಶ್ ಅವರು ಕಳೆದ ಸೋಮವಾರ ಸಂಜೆಯೇ ಆತ್ಮಹತ್ಯೆಗೆ (suicide) ಶರಣಾಗಿದ್ದು, ನಿನ್ನೆ ತಡರಾತ್ರಿ ಈ ವಿಷಯ ಬೆಳಕಿಗೆ ಬಂದಿದೆ. ಇಂದು ಬೆಳಿಗ್ಗೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವೈಯ್ಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ (Vyalikaval Police Station.) ಪ್ರಕರಣ ದಾಖಲಾಗಿದೆ.
ಆತ್ಮಹತ್ಯೆಗೂ ಮುನ್ನ 2 ನಿಮಿಷ 30 ಸೆಕೆಂಡ್‌ಗಳ ವಿಡಿಯೋ ಮಾಡಿರುವ ವೆಂಕಟೇಶ್, ತಮ್ಮ ಸಾವಿಗೆ ಚೀಟಿ (Chit Fund) ವ್ಯವಹಾರವೇ ಕಾರಣ ಎಂದು ಹೇಳಿದ್ದಾರೆ.
ವಿಡಿಯೋದಲ್ಲಿ ಯಾರು ಕೂಡ ಚೀಟಿ ವ್ಯವಹಾರ (Chit Fund business )ಮಾಡಬೇಡಿ. ಚೀಟಿಯಿಂದ ಆಗುವ ತೊಂದರೆಗಳು ಅಷ್ಟಿಷ್ಟಲ್ಲ. ನಾನು ಚೀಟಿ ಏಜೆಂಟ್ ಆಗಿ ಕಷ್ಟಕ್ಕೆ ಸಿಲುಕಿದ್ದೇನೆ. ಚೀಟಿ ಹಣವನ್ನು ಯಾರೋ ಕೈ ಎತ್ತಿದ್ರೆ, ಚೀಟಿ ಏಜೆಂಟರನ್ನು ಹಿಡಿದುಕೊಳ್ಳುತ್ತಾರೆ. ನಾನು ಈಗ ಅಂತಹುದ್ದೇ ಪರಿಸ್ಥಿತಿಗೆ ಸಿಲುಕಿದ್ದೇನೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಮೃತದೇಹವನ್ನು ಮರಣೋತ್ತರ (post-mortem) ಪರೀಕ್ಷೆಗಾಗಿ ರಾಮಯ್ಯ ಆಸ್ಪತ್ರೆ (Ramaiah Hospital) ಗೆ ರವಾನಿಸಲಾಗಿದ್ದು, ಮಧ್ಯಾಹ್ನ 12 ಗಂಟೆಯ ವೇಳೆಗೆ ಪಾರ್ಥಿವ ಶರೀರವನ್ನು ಮಲ್ಲೇಶ್ವರಂನ ವೈಯ್ಯಾಲಿಕಾವಲ್‌ನಲ್ಲಿರುವ ಅವರ ನಿವಾಸಕ್ಕೆ ತರಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
