ಬೆಂಗಳೂರು: ಮಗಳನ್ನು ಮಾಡೆಲ್ (Model) ಮಾಡಬೇಕೆಂಬ ಆಸೆಯಿಂದ ತಾಯಿ 3.74 ಲಕ್ಷ (₹3.74 lakh) ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ಕಂಡು ಬಂದಿದೆ.
ಮಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಮಾಡೆಲ್ ಮಾಡಬೇಕೆಂದು ಕೊಂಡಿದ್ದ ಸುಮಾ (Suma) ಅವರು ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ‘ಲಿಟ್ಲ್ ನೆಸ್ಟ್’ (Little Nest) ಎಂಬ ಚೈಲ್ಡ್ ಮಾಡೆಲಿಂಗ್ ಲಿಂಕ್ (Facebook page) ನೋಡಿದ್ದರು. ಆ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ವಂಚಕರು ಮಗುವಿನ ದಾಖಲಾತಿಗಳನ್ನು ಪಡೆದುಕೊಂಡಿದ್ದಾರೆ.
ದಾಖಲಾತಿ ಪಡೆದ ನಂತರ, ಟೆಲಿಗ್ರಾಂ ಗ್ರೂಪ್‌ಗೆ (Telegram group) ಸೇರುವಂತೆ ಮತ್ತೊಂದು ಲಿಂಕ್ ಕಳುಹಿಸಿದ್ದಾರೆ. ಆ ಗ್ರೂಪ್‌ನ ಅಡ್ಮಿನ್ ಮಹಿಳೆಗೆ ಕೆಲವು ಟಾಸ್ಕ್‌ಗಳನ್ನು (tasks) ನೀಡಿದ್ದಾನೆ. ಆರಂಭದಲ್ಲಿ ₹11,000 ಕಳುಹಿಸಿದಾಗ, ಸೈಬರ್ ಚೋರರು ₹19,000 ವಾಪಸ್ ನೀಡಿ ಮಹಿಳೆಯಲ್ಲಿ ನಂಬಿಕೆ ಹುಟ್ಟಿಸಿದ್ದಾರೆ.
ಬಳಿಕ, ಹೂಡಿಕೆಯ ಹೆಸರಿನಲ್ಲಿ ಹಂತ ಹಂತವಾಗಿ ಮಹಿಳೆಯಿಂದ ಒಟ್ಟು ₹3.74 ಲಕ್ಷ ರೂ.ಗಳಷ್ಟು ಹಣವನ್ನು ಸೈಬರ್ (Cyber) ಚೋರರು ದೋಚಿದ್ದಾರೆ. ಬಳಿಕ ಸಂಪರ್ಕ ಕಡಿತಗೊಂಡಿದೆ. ಮೋಸವಾಗಿರುವುದನ್ನು ಅರಿತ ಸುಮಾ, ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ (Vidyaranyapura Police Station) ದೂರು ದಾಖಲಿಸಿದ್ದಾರೆ.
