S Shorts

ಟೈಯರ್ ಬ್ಲಾಸ್ಟ್ ಆಗಿ ಬಿಯರ್ ಲಾರಿ ಪಲ್ಟಿ: ಲಕ್ಷಾಂತರ ರೂ. ಮೌಲ್ಯದ ಮದ್ಯ ಹಾನಿ!

ಟೈಯರ್ ಬ್ಲಾಸ್ಟ್ ಆಗಿ ಬಿಯರ್ ಲಾರಿ ಪಲ್ಟಿ: ಲಕ್ಷಾಂತರ ರೂ. ಮೌಲ್ಯದ ಮದ್ಯ ಹಾನಿ!
Author: Sagaradventure
Posted By: Sagaradventure
Updated: Jul 24, 2026 | 12:36 PM

ಹಾಸನ ತಾಲೂಕಿನ ದೊಡ್ಡಪುರ ಗ್ರಾಮದ ಬಳಿ ಬಿಯರ್ ಲೋಡ್ ಮಾಡಿಕೊಂಡು ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿದೆ. ಲಾರಿಯ ಟೈಯರ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆದ ಪರಿಣಾಮ ಚಾಲಕನ ಹತೋಟಿ ತಪ್ಪಿ ಈ ಅಪಘಾತ ಸಂಭವಿಸಿದೆ.

ನಗರದ ಕೈಗಾರಿಕಾ ಪ್ರದೇಶದಿಂದ ಕೊಪ್ಪಳಕ್ಕೆ ಸುಮಾರು 1,100 ಕೇಸ್ ಬಿಯರ್ ಬಾಟಲಿಗಳನ್ನು ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯೆ ಲಾರಿ ಪಲ್ಟಿಯಾದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳು ರಸ್ತೆಯುದ್ದಕ್ಕೂ ಬಿದ್ದು ಒಡೆದುಹೋಗಿದ್ದು, ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ.

ಲಾರಿ ಪಲ್ಟಿಯಾದ ಹಿನ್ನಲೆ ರಸ್ತೆಯ ಒಂದು ಬದಿ ವಾಹನ ಸಂಚಾರವನ್ನು ಬಂದ್ ಮಾಡಿ ಇನ್ನೊಂದು ಮಾರ್ಗದಲ್ಲಿ ಸಂಚರಿಸಲು ಅನುಕೂಲ ಮಾಡಿಕೊಡಲಾಗಿದೆ.