S Shorts

ಪತ್ನಿಗೆ ವಂಚಿಸಿ ಪ್ರೇಯಸಿಯೊಂದಿಗೆ ಚಕ್ಕಂದ; ರೆಡ್​​ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪತಿ

ಪತ್ನಿಗೆ ವಂಚಿಸಿ ಪ್ರೇಯಸಿಯೊಂದಿಗೆ ಚಕ್ಕಂದ; ರೆಡ್​​ಹ್ಯಾಂಡ್ ಆಗಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಪತಿ
Author: Meghana Gowda
Posted By: Meghana Gowda
Updated: Jan 13, 2026 | 7:16 AM

ಬೆಂಗಳೂರು: ನಂಬಿದ ಪತ್ನಿಗೆ ವಂಚಿಸಿ ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಪತಿ ಜೆಡ್ರೆಲಾ ಜಾಕೂಬ್ (Jacob)ಆರೂಪ್ ಈಗ ಪೊಲೀಸ್ ಅತಿಥಿಯಾಗಿದ್ದಾನೆ. ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಡಿಸಿಆರ್ ಇ (DCRE) ಪಶ್ಚಿಮ ವಿಭಾಗ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಜಾಕೋಬ್ ಆರಂಭದಲ್ಲಿ ನಿರುದ್ಯೋಗಿಯಾಗಿದ್ದ. ಈ ವೇಳೆ ಆತನ ಪತ್ನಿ ಲಕ್ಷಾಂತರ ರೂಪಾಯಿ ಸಂಬಳ ಬರುವ ತನ್ನ ಪ್ರತಿಷ್ಠಿತ ಉದ್ಯೋಗವನ್ನೇ ಪತಿಗೆ ಬಿಟ್ಟುಕೊಟ್ಟು, ಆತನ ವೃತ್ತಿಜೀವನಕ್ಕೆ ಆಸರೆಯಾಗಿದ್ದರು. ಆದರೆ ಮಗುವಾದ ನಂತರ ಪತಿಯ ಅಸಲಿ ರೂಪ ಬಯಲಾಗಿತ್ತು.

ಪತ್ನಿ ಎರಡನೇ ಬಾರಿ ಗರ್ಭಿಣಿಯಾದಾಗ ಆಕೆಯ ಜಾತಿನಿಂದನೆ ಮಾಡಿದ್ದಲ್ಲದೆ, ಗರ್ಭಪಾತವಾಗುವಂತೆ ಆಕೆಯ ಮೇಲೆ ಭೀಕರ ಹಲ್ಲೆ ನಡೆಸಿದ್ದ ಎನ್ನಲಾಗಿದೆ.

ಪತ್ನಿ ಆಂಧ್ರಪ್ರದೇಶಕ್ಕೆ ತೆರಳಿದ್ದ ಸಂದರ್ಭವನ್ನು ಬಳಸಿಕೊಂಡ ಆರೋಪಿ, ಬೆಂಗಳೂರಿನ ಪಿಜಿಯೊಂದರಲ್ಲಿ ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ. ಪತಿಯ ಅಕ್ರಮ ಸಂಬಂಧದ ಬಗ್ಗೆ ಸುಳಿವು ಸಿಕ್ಕಿದ ಕೂಡಲೇ ಪತ್ನಿ ಆಂಧ್ರದಿಂದ ದಿಢೀರ್ ಬೆಂಗಳೂರಿಗೆ ಆಗಮಿಸಿದ್ದರು. ಪೊಲೀಸರ ಸಹಾಯದೊಂದಿಗೆ ಪಿಜಿಗೆ ಎಂಟ್ರಿ ಕೊಟ್ಟಾಗ, ಆರೋಪಿ ಪ್ರೇಯಸಿಯೊಂದಿಗೆ ಒಂದೇ ರೂಮಿನಲ್ಲಿರುವುದು ಪತ್ತೆಯಾಗಿದೆ.

ನೊಂದ ಪತ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಜಾಕೋಬ್ ವಿರುದ್ಧ ಅಟ್ರಾಸಿಟಿ (Atrocity Case) ಮತ್ತು ಹಲ್ಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.