ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲಕೂಡಿ ಬಂದಿದೆ. ಸಚಿವರಾಗುವವರ ಅಂತಿಮ ಪಟ್ಟಿಯನ್ನು ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದ್ದು, ಈ ಪಟ್ಟಿಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈಸೇರಿದೆ. ಈ ಮೂಲಕ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮನೆಮಾಡಿದ್ದ ಕುತೂಹಲಕ್ಕೆ ತೆರೆಬಿದ್ದಿದ್ದು, ಶೀಘ್ರದಲ್ಲೇ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಯಿದೆ.
ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಯಾರ್ಯಾರಿದ್ದಾರೆ?
ಹೈಕಮಾಂಡ್ ಅಂತಿಮಗೊಳಿಸಿರುವ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಹಿರಿಯ ಹಾಗೂ ಯುವ ನಾಯಕರಿಗೆ ಮಣೆ ಹಾಕಲಾಗಿದ್ದು, ಪ್ರಾದೇಶಿಕ ಹಾಗೂ ಜಾತಿವಾರು ಪ್ರಾತಿನಿಧ್ಯವನ್ನು ಸರಿದೂಗಿಸುವ ಯತ್ನ ಮಾಡಲಾಗಿದೆ. ಪಟ್ಟಿಯಲ್ಲಿರುವ ಪ್ರಮುಖ ನಾಯಕರ ವಿವರ ಇಲ್ಲಿದೆ:
- ಲಕ್ಷ್ಮಣ ಸವದಿ(ಅಥಣಿ)
- ಮಾಗಡಿ ಬಾಲಕೃಷ್ಣ(ಮಾಗಡಿ)
- ವಿಜಯಾನಂದ ಕಾಶಪ್ಪನವರ್(ಹುನಗುಂದ)
- ಶಿವರಾಜ್ ತಂಗಡಗಿ( ಕನಕಗಿರಿ)
- ಎಸ್.ಎಸ್.ಮಲ್ಲಿಕಾರ್ಜುನ(ದಾವಣಗೆರೆ ಉತ್ತರ)
- ಪುಟ್ಟರಂಗಶೆಟ್ಟಿ(ಚಾಮರಾಜನಗರ)
- ಸಂತೋಷ್ ಲಾಡ್(ಕಲಘಟಗಿ)
- ಡಾ.ಅಜಯ್ ಸಿಂಗ್(ಜೇವರ್ಗಿ)
- ಗಾಯತ್ರಿ ಶಾಂತೇಗೌಡ(ಮೇಲ್ಮನೆ ಸದಸ್ಯೆ)
- ರಿಜ್ವಾನ್ ಅರ್ಷದ್(ಶಿವಾಜಿಇ)
- ಜಮೀರ್ ಅಹ್ಮದ್ ಖಾನ್(ಚಾಮರಾಜಪೇಟೆ)
- ರುದ್ರಪ್ಪ ಲಮ್ಹಾಣಿ
- ಶಿವಲಿಂಗೇಗೌಡ(ಅರಸೀಕೆರೆ)
- ಚೆಲುವರಾಯಸ್ವಾಮಿ(ನಾಗಮಂಗಲ)
- ಬಸವರಾಜ ರಾಯರೆಡ್ಡಿ(ಯಲಬುರ್ಗಾ)
- ಟಿ.ರಘುಮೂರ್ತಿ(ಚಳ್ಳಕೆರೆ)
- ಬಿ.ನಾಗೇಂದ್ರ(ಬಳ್ಳಾರಿ ಗ್ರಾಮೀಣ)
- ಮಂಕಾಳು ವೈದ್ಯ
- ಬಸವಂತಪ್ಪ(ಮಾಯಕೊಂಡ)
- ಮಧು ಬಂಗಾರಪ್ಪ (ಸೊರಬ)
