S Shorts

Namma Metroದಲ್ಲಿ ಸರಣಿ ಆತ್ಮಹತ್ಯೆ ತಡೆಗೆ ‘ಸ್ಕ್ರೀನ್ ಡೋರ್’ ಸೂತ್ರ: 191 ನಿಲ್ದಾಣಗಳಲ್ಲಿ ಸುರಕ್ಷತಾ ವ್ಯವಸ್ಥೆಗೆ ಮುಂದಾದ BMRCL!

Namma Metroದಲ್ಲಿ ಸರಣಿ ಆತ್ಮಹತ್ಯೆ ತಡೆಗೆ ‘ಸ್ಕ್ರೀನ್ ಡೋರ್’ ಸೂತ್ರ: 191 ನಿಲ್ದಾಣಗಳಲ್ಲಿ ಸುರಕ್ಷತಾ ವ್ಯವಸ್ಥೆಗೆ ಮುಂದಾದ BMRCL!
Author: Sagaradventure
Posted By: Sagaradventure
Updated: Jul 16, 2026 | 10:28 AM

ಬೆಂಗಳೂರಿನ ‘ನಮ್ಮ ಮೆಟ್ರೋ’ ನಿಲ್ದಾಣಗಳು ಇತ್ತೀಚೆಗೆ ಆತ್ಮಹತ್ಯೆಯ (Suicide) ತಾಣಗಳಾಗುತ್ತಿರುವುದಕ್ಕೆ ಕಡಿವಾಣ ಹಾಕಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಎಚ್ಚೆತ್ತುಕೊಂಡಿದೆ. ಮೆಟ್ರೋ ನಿಲ್ದಾಣಗಳಲ್ಲಿ ಪದೇ ಪದೇ ನಡೆಯುತ್ತಿರುವ ಆತ್ಮಹತ್ಯೆ ಹಾಗೂ ಆಕಸ್ಮಿಕ ಅವಘಡಗಳನ್ನು ತಪ್ಪಿಸಲು, ದೆಹಲಿ ಮತ್ತು ಮುಂಬೈ ಮೆಟ್ರೋ ಮಾದರಿಯಲ್ಲಿ ‘ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್’ (PSD – Platform Screen Doors) ಅಳವಡಿಸಲು ಬಿಎಂಆರ್ ಸಿಎಲ್ ಮುಂದಾಗಿದೆ.

ಹಣ ಉಳಿಸಲು ಹೋಗಿ ಕಪ್ಪುಚುಕ್ಕೆ ಅಂಟಿಸಿಕೊಂಡಿದ್ದ ನಿಗಮ! 

ಮೆಟ್ರೋ ನಿಲ್ದಾಣಗಳ ನಿರ್ಮಾಣದ ವೇಳೆ ಕೋಟಿಗಟ್ಟಲೆ ಹಣ ಉಳಿಸುವ ಉದ್ದೇಶದಿಂದ ಬಿಎಂಆರ್ ಸಿಎಲ್ ಈ ಹಿಂದೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ ವ್ಯವಸ್ಥೆಯನ್ನು ಅಳವಡಿಸಿರಲಿಲ್ಲ. ನಿಗಮದ ಈ ದೊಡ್ಡ ಪ್ರಮಾದದಿಂದಾಗಿಯೇ ಇತ್ತೀಚೆಗೆ ನಿಲ್ದಾಣಗಳಲ್ಲಿ ಸರಣಿ ಆತ್ಮಹತ್ಯೆ ಪ್ರಕರಣಗಳು ಜರುಗಿ, ಮೆಟ್ರೋ ನಿಗಮಕ್ಕೆ ಬಾರಿ ಕಪ್ಪುಚುಕ್ಕೆ ಅಂಟಿಕೊಂಡಿತ್ತು. ಇದೀಗ ಎಚ್ಚೆತ್ತುಕೊಂಡಿರುವ ನಿಗಮವು, ಪ್ರಯಾಣಿಕರ ಸುರಕ್ಷತೆಗಾಗಿ ಕೊನೆಗೂ ಮಹತ್ವದ ಹೆಜ್ಜೆ ಇಟ್ಟಿದೆ.

1,274 ಕೋಟಿ ರೂ. ವೆಚ್ಚದ ಬೃಹತ್ ಯೋಜನೆ ನಿಲ್ದಾಣಗಳಲ್ಲಿ ನಡೆಯುವ ಆತ್ಮಹತ್ಯೆ ಹಾಗೂ ಆಕಸ್ಮಿಕವಾಗಿ ಪ್ರಯಾಣಿಕರು ಹಳಿ ಮೇಲೆ ಬೀಳುವುದನ್ನು ಸಂಪೂರ್ಣವಾಗಿ ತಡೆಯುವ ಉದ್ದೇಶದಿಂದ ನಗರದ ಒಟ್ಟು 191 ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳನ್ನು ಅಳವಡಿಸಲು ಪ್ಲಾನ್ ಮಾಡಲಾಗಿದೆ.

ಮೆಟ್ರೋ ಯೋಜನೆಯ ಹಂತ 1, 2, 2A, 2B, 3 ಮತ್ತು 3A ವ್ಯಾಪ್ತಿಯ ಎಲ್ಲಾ ನಿಲ್ದಾಣಗಳಲ್ಲೂ ಈ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಈ ಬೃಹತ್ ಸೇಫ್ಟಿ ಪ್ರಾಜೆಕ್ಟ್‌ಗಾಗಿ ಬರೋಬ್ಬರಿ 1,274 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಬಿಎಂಆರ್ ಸಿಎಲ್ ಯೋಜನೆ ರೂಪಿಸಿದೆ.