S Shorts

ರೀಲ್ಸ್‌ಗಾಗಿ ಬಟ್ಟೆ ಆರ್ಡರ್; ರಿಟರ್ನ್ ಮಾಡುವಾಗ ಸಿಕ್ಕಿಬಿದ್ದ ಸೋಶಿಯಲ್ ಮೀಡಿಯಾ ಸ್ಟಾರ್!

ರೀಲ್ಸ್‌ಗಾಗಿ ಬಟ್ಟೆ ಆರ್ಡರ್; ರಿಟರ್ನ್ ಮಾಡುವಾಗ ಸಿಕ್ಕಿಬಿದ್ದ ಸೋಶಿಯಲ್ ಮೀಡಿಯಾ ಸ್ಟಾರ್!
Author: Savina Naik
Posted By: Savina Naik
Updated: Apr 16, 2026 | 5:28 PM

ನವದೆಹಲಿ: ಇನ್ಸ್ಟಾಗ್ರಾಮ್ ರೀಲ್ಸ್ ಮಾಡಲು ಆನ್‌ಲೈನ್‌ನಲ್ಲಿ ಬಟ್ಟೆ ಆರ್ಡರ್ ಮಾಡಿ, ನಂತರ ಅದನ್ನು ಸುಳ್ಳು ಕಾರಣ ನೀಡಿ ವಾಪಸ್ ಮಾಡಲು ಯತ್ನಿಸಿದ ಯುವತಿಯೊಬ್ಬಳ ವಂಚನೆಯನ್ನು ಡೆಲಿವರಿ ಬಾಯ್ ಬಯಲಿಗೆಳೆದಿದ್ದಾನೆ.

ಒಬ್ಬ ಯುವತಿ ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್ ಮೂಲಕ ಸುಂದರವಾದ ಬಟ್ಟೆಗಳನ್ನು ಆರ್ಡರ್ ಮಾಡಿದ್ದಳು.  ಆ ಬಟ್ಟೆಗಳು ಇಷ್ಟವಾಗಲಿಲ್ಲ ಎಂದು ‘ರಿಟರ್ನ್’ ಹಾಕಿದ್ದಾಳೆ.  ಬಟ್ಟೆಯನ್ನು ಪಡೆದುಕೊಳ್ಳಲು ಡೆಲಿವರಿ ಬಾಯ್  ಬಂದು, ‘ಮ್ಯಾಡಂ, ಬಟ್ಟೆ ಚೆನ್ನಾಗಿಯೇ ಇದೆಯಲ್ಲ, ಯಾಕೆ ವಾಪಸ್ ಮಾಡ್ತಿದ್ದೀರಾ?’ ಎಂದು  ಕೇಳಿದ್ದಾನೆ. ಅದಕ್ಕೆ ಆಕೆ ‘ಅಣ್ಣ, ಈ ಬಟ್ಟೆಗಳು ನನಗೆ ತುಂಬಾ ಟೈಟ್ ಆಗುತ್ತಿವೆ (Tight), ಹಾಕಿಕೊಳ್ಳಲು ಆಗುತ್ತಿಲ್ಲ, ಅದಕ್ಕೆ ವಾಪಸ್ ಕೊಡ್ತಿದ್ದೀನಿ’ ಎಂದು ಹೇಳಿದ್ದಾಳೆ.

‘ಸರಿ ಮ್ಯಾಡಂ, ನಾನು ನಿಮ್ಮ ರಿಟರ್ನ್ ಪ್ರೊಸೆಸ್ ಮಾಡ್ತೀನಿ, ನಿಮ್ಮ ಇನ್ಸ್ಟಾಗ್ರಾಮ್ ಐಡಿ  ಕೊಡಿ’ ಎಂದಿದ್ದಾನೆ. ಆಕೆ ಆರ್ಡರ್ ಮಾಡಿದ ಅದೇ ಬಟ್ಟೆಯನ್ನು ಧರಿಸಿ ಕಳೆದ ಎರಡು ದಿನಗಳಲ್ಲಿ 4-5 ರೀಲ್ಸ್‌ಗಳನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ.

ಈ ಬಟ್ಟೆ ನಿಮಗೆ ಟೈಟ್ ಆಗಿದ್ದರೆ, ಇಷ್ಟು ಆರಾಮವಾಗಿ ಡ್ಯಾನ್ಸ್ ಮಾಡ್ತಾ ರೀಲ್ಸ್ ಮಾಡೋಕೆ ಹೇಗೆ ಸಾಧ್ಯವಾಯ್ತು?’  ‘ನಿಮ್ಮ ತರಹದ ಎಷ್ಟೋ ಜನರನ್ನು ನಾನು ನೋಡಿದ್ದೇನೆ. ಹೊಸ ಬಟ್ಟೆ ಆರ್ಡರ್ ಮಾಡೋದು, ರೀಲ್ಸ್ ಮಾಡೋದು, ಪಾರ್ಟಿಗೆ ಹೋಗಿ ಬರೋದು, ಆಮೇಲೆ ಏನೋ ಒಂದು ಕಾರಣ ಹೇಳಿ ವಾಪಸ್ ಮಾಡೋದು. ಇದು ಕಂಪನಿಗಳಿಗೆ ಮತ್ತು ನಮ್ಮಂತಹ ಕೆಲಸಗಾರರಿಗೆ ಎಷ್ಟು ತೊಂದರೆ ಕೊಡುತ್ತೆ ಅನ್ನೋದು ನಿಮಗೆ ಗೊತ್ತಾ?’ ಎಂದು ಗದರಿಸಿದ್ದಾನೆ.

  ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರಿಂದ ಆ ಯುವತಿ ತಲೆತಗ್ಗಿಸಿ ‘ಸಾರಿ’ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದ್ದಾಳೆ.