ನವದೆಹಲಿ: ಯುಪಿಐ ಮೂಲಕ 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ಒಂದು ಗಂಟೆ ಬಳಿಕ ಕಡಿತವಾಗುವಂತೆ ಮಾಡಲು ಆರ್‌ಬಿಐ ಮುಂದಾಗಿದೆ.
ಡಿಜಿಟಲ್ ಪಾವತಿ ಅಕ್ರಮಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಇದೀಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದಾಗಿದೆ. 10,000 ರೂ.ಗಿಂತ ಹೆಚ್ಚಿನ ಹಣವನ್ನು ಪಾವತಿಸುವಾಗ ತಕ್ಷಣ ದುಡ್ಡು ಕಡಿತವಾಗುವುದಿಲ್ಲ. ಬದಲಿಗೆ ಆ ಹಣವನ್ನು ಬ್ಯಾಂಕ್ ಒಂದು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುತ್ತದೆ.
ಆರ್‌ಬಿಐ ನಿಯಮದ ಪ್ರಕಾರ, 10 ಸಾವಿರ ರೂ.ಗಿಂತ ಹೆಚ್ಚಿನ ಹಣವನ್ನು ಯಾರ ಖಾತೆಗೆ ವರ್ಗಾಯಿಸಿರುತ್ತೀರೋ ಆ ಹಣ ತಕ್ಷಣ ಪಾವತಿ ಆಗುವುದಿಲ್ಲ ಅಥವಾ ಕಳಿಸಿದವರ ಖಾತೆ ಸೇರುವುದಿಲ್ಲ. ನೀವು ಕಳಿಸಿದ ಹಣವನ್ನು ಬ್ಯಾಂಕ್ ಒಂದು ಗಂಟೆ ಕಾಲ ಹಿಡಿದಿಟ್ಟುಕೊಳ್ಳುತ್ತದೆ. ಬಳಿಕ ಯಾರ ಖಾತೆ ಸೇರಬೇಕೋ ಆ ಖಾತೆಗೆ ಜಮೆಯಾಗುತ್ತದೆ.
