Posted By:Meghana Gowda Updated: Nov 3, 2025 | 10:23 AM
ಬೆಂಗಳೂರು: ನ್ಯಾಧೀಶರ ಆದೇಶದಂತೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳು ನ್ಯಾಯಾಲಯದ ಮುಂದೆ ಹಾಜರಾಗಿ, ನಿಯಮಾನುಸಾರ ಸರತಿಯಲ್ಲಿ ನಿಂತಿದ್ದು, ಪವಿತ್ರಾ ಗೌಡ ಮುಂದೆ ಹಾಗೂ ದರ್ಶನ್ ಅವರ ಹಿಂದೆ ನಿಂತಿದ್ದರು. ಪವಿತ್ರಾ ಗೌಡ “ಮುಂದೆ ಬನ್ನಿ” ಎಂದು ಹೇಳಿದ ನಂತರ ದರ್ಶನ್ ಮುಂದೆ ಬಂದಿದ್ದು, ಪವಿತ್ರಾ ದಾರಿಯನ್ನೂ ಮಾಡಿಕೊಟ್ಟರು.
ಜಡ್ಜ್ ಎಲ್ಲ ಆರೋಪಿಗಳ ಹೆಸರನ್ನು ಒಂದೊಂದಾಗಿ ಕರೆದು ಹಾಜರಿ ಖಚಿತಪಡಿಸಿಕೊಂಡರು. ಬಳಿಕ ಎ1 ಪವಿತ್ರಾ ಗೌಡ ಸೇರಿದಂತೆ ಎಲ್ಲರ ಮೇಲಿನ ಕಿಡ್ನ್ಯಾಪ್, ಕೊಲೆ, ಅಕ್ರಮ ಕೂಟ ಮತ್ತು ಒಳಸಂಚು ಆರೋಪಗಳು ಓದಲಾಯಿತು.
ಜಡ್ಜ್ “ನಿಮ್ಮ ಮೇಲಿನ ಆರೋಪಗಳಿಗೆ ಏನು ಹೇಳುತ್ತೀರಿ?” ಎಂದು ಕೇಳಿದಾಗ, ಎಲ್ಲಾ ಆರೋಪಿಗಳು ಆರೋಪಗಳನ್ನು ನಿರಾಕರಿಸಿ, ಒಟ್ಟಿಗೆ ‘ಸುಳ್ಳು! ಸುಳ್ಳು!’ ಎಂದು ಕೂಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ವಿಚಾರಣೆ ಬಳಿಕ ಕೋರ್ಟ್ ಪ್ರಕರಣವನ್ನು ನವೆಂಬರ್ 10ಕ್ಕೆ ಮುಂದೂಡಿದೆ ಎಂದು ನ್ಯಾಯಾಧೀಶರು ತಿಳಿಸಿದರು. ಈ ಮೂಲಕ ಆರೋಪಿಗಳ ಮೇಲಿನ ಚಾರ್ಜ್ ಫ್ರೇಮ್ ಪ್ರಕ್ರಿಯೆ ಮುಕ್ತಾಯಗೊಂಡಿದೆ.
Related
Javascript not detected. Javascript required for this site to function. Please enable it in your browser settings and refresh this page.