S Shorts

ಸಂಪಿಗೆಹಳ್ಳಿಯಲ್ಲಿ ಕೊಳೆತ ಶ*ವ ಪತ್ತೆ ಪ್ರಕರಣ: ಪೊಲೀಸರು ಕೊ*ಲೆಗಾರನನ್ನು ಬೆನ್ನತ್ತಿ ಬಂಧಿಸಿದ್ದೇ ರೋಚಕ!

ಸಂಪಿಗೆಹಳ್ಳಿಯಲ್ಲಿ ಕೊಳೆತ ಶ*ವ ಪತ್ತೆ ಪ್ರಕರಣ: ಪೊಲೀಸರು ಕೊ*ಲೆಗಾರನನ್ನು ಬೆನ್ನತ್ತಿ ಬಂಧಿಸಿದ್ದೇ ರೋಚಕ!
Author: Sagaradventure
Posted By: Sagaradventure
Updated: Sep 26, 2026 | 12:23 PM

ಬೆಂಗಳೂರಿನ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಎಂ.ಎಸ್. ನಗರ ಅಗ್ರಹಾರ ಲೇಔಟ್‌ನ ಖಾಲಿ ನಿವೇಶನವೊಂದರಲ್ಲಿ ಪತ್ತೆಯಾಗಿದ್ದ ಮಹಿಳೆಯ ಕೊ*ಳೆತ ಶವದ ಹಿಂದಿನ ನಿಗೂಢ ರಹಸ್ಯವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ನಿಯಮದಂತೆ ಖಾಲಿ ಜಾಗದ ಮಾಲೀಕರು ತಮ್ಮ ನಿವೇಶನವನ್ನು ಸ್ವಚ್ಛಗೊಳಿಸುವಾಗ ಮಹಿಳೆಯ ಶ*ವವೊಂದು ಪತ್ತೆಯಾಗಿತ್ತು. 

ಈ ಪ್ರಕರಣದ ತನಿಖೆ ನಡೆಸಿದ ಸಂಪಿಗೆಹಳ್ಳಿ ಪೊಲೀಸರು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಕೊ*ಲೆ ಮಾಡಿ, ಶ*ವವನ್ನು ಹಾಸಿಗೆಯಲ್ಲಿ ಸುತ್ತಿ ಬಿಸಾಡಿದ್ದ ಎಂಬ ಆಘಾತಕಾರಿ ಸತ್ಯವನ್ನು ಬಯಲಿಗೆಳೆದಿದ್ದಾರೆ. ಕೊಳೆತು ಸಂಪೂರ್ಣವಾಗಿ ಅಸ್ಥಿಪಂಜರದ ಸ್ಥಿತಿಯಲ್ಲಿದ್ದ ಶ*ವವನ್ನು ಇಟ್ಟುಕೊಂಡು ಕೇವಲ ಸಣ್ಣ ಸುಳಿವುಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿರುವ ರೀತಿ ಅತ್ಯಂತ ರೋಚಕವಾಗಿದೆ.

ಒಡಿಶಾ ಮೂಲದ ಸಾಗರ್ ಚಂದ್ರ ರಾವತ್ (32) ಹಾಗೂ ಆತನ ಪತ್ನಿ ಅನುಸೂಯ (28) ಪ್ರೀತಿಸಿ ಮದುವೆಯಾಗಿದ್ದು, ಬೆಂಗಳೂರಿನ ಪ್ರತ್ಯೇಕ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಆಗಸ್ಟ್ 11 ರಂದು ಈ ಜಗಳ ವಿಕೋಪಕ್ಕೆ ತಿರುಗಿ, ಕೋಪದ ಭರದಲ್ಲಿ ಸಾಗರ್ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಕೊ*ಲೆ ಮಾಡಿದ್ದ. 

ಆಕೆಯ ಸಾ*ವಿನ ನಂತರ ಬರೋಬ್ಬರಿ 3 ದಿನಗಳ ಕಾಲ ಶ*ವವನ್ನು ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ ಆರೋಪಿ, ಶ*ವ ಕೊಳೆಯಲು ಆರಂಭಿಸಿದಾಗ ಅದನ್ನು ಹಾಸಿಗೆಯೊಂದರಲ್ಲಿ ಸುತ್ತಿ ಸಂಪಿಗೆಹಳ್ಳಿ ಸಮೀಪದ ಖಾಲಿ ಸೈಟ್‌ನಲ್ಲಿ ಬಿಸಾಡಿದ್ದ. ತನ್ನ ಕೃತ್ಯ ಯಾರಿಗಾದರೂ ಗೊತ್ತಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಆತ ಪ್ರತಿದಿನ ಅದೇ ಜಾಗಕ್ಕೆ ಹೋಗಿ ಕಣ್ಣಾಡಿಸಿಕೊಂಡು ಬರುತ್ತಿದ್ದ ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ.

ಪೊಲೀಸರು ಶ*ವ ಪತ್ತೆಯಾದ ಸ್ಥಳಕ್ಕೆ ಭೇಟಿ ನೀಡಿದಾಗ ಶ*ವವು ಗುರುತು ಹಿಡಿಯಲಾಗದಷ್ಟು ಕೊಳೆತು ಹೋಗಿತ್ತು. ಮಾನವೀಯತೆಯ ಆಧಾರದ ಮೇಲೆ ಶ*ವದ ಅಂತ್ಯಸಂಸ್ಕಾರ ನೆರವೇರಿಸಿದ್ದ ಪೊಲೀಸರು, ಶ*ವದ ಬಳಿ ಸಿಕ್ಕಿದ್ದ ಬಟ್ಟೆಯ ಟ್ಯಾಗ್, ಬಳೆಗಳು ಹಾಗೂ ಒಂದು ‘ಗಣೇಶ ಪೆಂಡೆಂಟ್’ ಅನ್ನು ಪ್ರಮುಖ ಸಾಕ್ಷ್ಯಗಳನ್ನಾಗಿ ಪರಿಗಣಿಸಿದ್ದರು. ಬಟ್ಟೆಯ ಟ್ಯಾಗ್ ಆಧಾರದ ಮೇಲೆ ಮಾರ್ಟ್‌ನಿಂದ ಪಡೆದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಅದು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. 

ಆದರೆ, ಆ ಗಣೇಶ ಪೆಂಡೆಂಟ್ ಅನ್ನು ಹೆಚ್ಚಾಗಿ ಒಡಿಶಾ ಮೂಲದವರು ಧರಿಸುತ್ತಾರೆ ಎಂಬ ಸ್ಥಳೀಯ ಮಾಹಿತಿಯ ಆಧಾರದ ಮೇಲೆ ಪೊಲೀಸರು ಘಟನಾ ಸ್ಥಳದ 1.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸವಿದ್ದ ಒಡಿಶಾ ಮೂಲದವರ ಡೇಟಾ ಕಲೆಹಾಕಿದರು. ಎಂ.ಎಸ್. ನಗರದ ಸುತ್ತಮುತ್ತಲ 8 ಮಹಿಳೆಯರ ಸಂಪರ್ಕ ಸಂಖ್ಯೆಗಳನ್ನು ಪರಿಶೀಲಿಸಿದಾಗ, ಅದರಲ್ಲಿ ಅನುಸೂಯ ಎಂಬಾಕೆಯ ನಂಬರ್‌ಗೂ ಹಾಗೂ ಮಾರ್ಟ್‌ನಿಂದ ದೊರೆತ ನಂಬರ್‌ಗೂ ಕೇವಲ ಒಂದು ಅಂಕಿಯ ವ್ಯತ್ಯಾಸವಿರುವುದು ಪತ್ತೆಯಾಗಿತ್ತು.

ಈ ಸಣ್ಣ ಸುಳಿವಿನಿಂದಲೇ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು, ಟವರ್ ಡಂಪ್ ತಂತ್ರಜ್ಞಾನದ ಮೂಲಕ ಅನುಸೂಯ ಅವರ ಪತಿ ಸಾಗರ್‌ನನ್ನು ಪತ್ತೆಹಚ್ಚಿ ವಿಚಾರಣೆಗೊಳಪಡಿಸಿದರು. ಪೊಲೀಸರು ಸಂಪರ್ಕಕ್ಕೆ ಬರುತ್ತಿದ್ದಂತೆಯೇ ಆರೋಪಿಯು ತನ್ನ ಪತ್ನಿ ಕಣ್ಮರೆಯಾಗಿದ್ದಾಳೆ, ಆಕೆಯನ್ನು ಹುಡುಕಲು ಊರಿಗೆ ಹೋಗುತ್ತಿದ್ದೇನೆ ಎಂದು ಹೇಳಿ ಒಡಿಶಾಗೆ ಪರಾರಿಯಾಗಲು ಯತ್ನಿಸಿದ್ದ. 

ಆದರೆ, ಆತನ ಮೇಲೆ ತೀವ್ರ ಅನುಮಾನಗೊಂಡ ಪೊಲೀಸರು, ಸಾಗರ್ ಕೆಲಸ ಮಾಡುತ್ತಿದ್ದ ಹೋಟೆಲ್‌ಗೆ ಭೇಟಿ ನೀಡಿ ದಂಪತಿಯ ನಡುವಿನ ಜಗಳದ ಬಗ್ಗೆ ಖಚಿತ ಮಾಹಿತಿ ಕಲೆಹಾಕಿದರು. ಬಳಿಕ ಆತನನ್ನು ವಶಕ್ಕೆ ಪಡೆದು ಕಠಿಣವಾಗಿ ವಿಚಾರಣೆ ನಡೆಸಿದಾಗ, ತಾನೇ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಆರೋಪಿ ಸಾಗರ್ ಒಪ್ಪಿಕೊಂಡಿದ್ದಾನೆ.