S Shorts

Shocking News | ಅತ್ತೆ ಕೇಳಿದ ಒಂದು ಚಮಚ ‘ತುಪ್ಪ’ ತಂದಿಟ್ಟ ದುರಂತ: ವಿ*ಷ ಸೇವಿಸಿ ಪ್ರಾಣ ಕಳೆದುಕೊಂಡ 26ರ ಹರೆಯದ ಸೊಸೆ!

Shocking News | ಅತ್ತೆ ಕೇಳಿದ ಒಂದು ಚಮಚ ‘ತುಪ್ಪ’ ತಂದಿಟ್ಟ ದುರಂತ: ವಿ*ಷ ಸೇವಿಸಿ ಪ್ರಾಣ ಕಳೆದುಕೊಂಡ 26ರ ಹರೆಯದ ಸೊಸೆ!
Author: Sagaradventure
Posted By: Sagaradventure
Updated: Jan 16, 2026 | 6:41 AM

ಮಧ್ಯಪ್ರದೇಶ: ಸಂಸಾರ ಅಂದಮೇಲೆ ಸಣ್ಣಪುಟ್ಟ ಜಗಳಗಳು ಸಹಜ. ಆದರೆ, ಇಲ್ಲೊಂದು ಕಡೆ ಮನೆಯಲ್ಲಿ ನಡೆದ ತೀರಾ ಕ್ಷುಲ್ಲಕ ವಿಷಯವೊಂದು ದೊಡ್ಡ ದುರಂತಕ್ಕೆ ಕಾರಣವಾಗಿದೆ. ಕೇವಲ ಅಡುಗೆಗೆ ಬಳಸುವ ‘ತುಪ್ಪ’ದ ವಿಚಾರವಾಗಿ ಅತ್ತೆಯೊಂದಿಗೆ ಉಂಟಾದ ಮನಸ್ತಾಪದಿಂದ ನೊಂದ 26 ವರ್ಷದ ಗೃಹಿಣಿಯೊಬ್ಬರು ವಿಷ ಸೇವಿಸಿ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಇಮ್ಲೌಡಿ ಗ್ರಾಮದಲ್ಲಿ ನಡೆದಿದೆ.

ಘಟನೆಯ ವಿವರ: ಮೃ*ತ ದುರ್ದೈವಿ ಮಹಿಳೆಯನ್ನು ಸೋನಂ ಜಾತವ್ ಎಂದು ಗುರುತಿಸಲಾಗಿದೆ. 2018ರಲ್ಲಿ ಧನಪಾಲ್ ಎಂಬುವವರನ್ನು ವಿವಾಹವಾಗಿದ್ದ ಸೋನಂ ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಇಡೀ ಕುಟುಂಬವು ಒಂದೇ ಮನೆಯಲ್ಲಿ ವಾಸಿಸುತ್ತಿದ್ದರೂ (ಜಂಟಿ ಕುಟುಂಬ), ಅತ್ತೆ-ಸೊಸೆ ನಡುವಿನ ಸಣ್ಣಪುಟ್ಟ ಕೌಟುಂಬಿಕ ಕಲಹಗಳಿಂದಾಗಿ ಇತ್ತೀಚೆಗೆ ಸೋನಂ ಪ್ರತ್ಯೇಕವಾಗಿ ಅಡುಗೆ ಮಾಡುತ್ತಿದ್ದರು ಎನ್ನಲಾಗಿದೆ.

ದುರಂತಕ್ಕೆ ಕಾರಣವಾಯ್ತು ‘ತುಪ್ಪ’: ಘಟನೆಯ ದಿನ, ಧನಪಾಲ್ ಅವರ ತಾಯಿ (ಅತ್ತೆ) ಅಡುಗೆಗಾಗಿ ಸೊಸೆ ಸೋನಂ ಬಳಿ ಸ್ವಲ್ಪ ತುಪ್ಪ ಕೇಳಿದ್ದಾರೆ. ಹಳೆಯ ಜಗಳಗಳ ಕಾರಣದಿಂದಲೋ ಏನೋ, ಸೋನಂ ಮೊದಲು ತುಪ್ಪ ನೀಡಲು ನಿರಾಕರಿಸಿದ್ದಾರೆ. ಆದರೆ, ಪತಿ ಧನಪಾಲ್ ಅವರ ಒತ್ತಾಯಕ್ಕೆ ಮಣಿದು ಕೊನೆಗೂ ಅತ್ತೆಗೆ ತುಪ್ಪ ನೀಡಿದ್ದಾರೆ. ಆದರೆ ಕಥೆ ಇಲ್ಲಿಗೆ ಮುಗಿಯಲಿಲ್ಲ. ಇದಾದ ಸ್ವಲ್ಪ ಹೊತ್ತಿನ ಬಳಿಕ, ಪತಿ ಧನಪಾಲ್ ಮಾರುಕಟ್ಟೆಯಿಂದ ತನ್ನ ತಾಯಿಗಾಗಿ ಪ್ರತ್ಯೇಕವಾಗಿ ಮತ್ತಷ್ಟು ತುಪ್ಪ ತಂದುಕೊಟ್ಟಿದ್ದಾರೆ.

ಪತಿಯ ಈ ವರ್ತನೆ ಸೋನಂ ಅವರ ಕೆಂಗಣ್ಣಿಗೆ ಗುರಿಯಾಗಿದೆ. “ನನ್ನ ಬಳಿ ಇದ್ದರೂ ತಂದುಕೊಟ್ಟೆ, ಆದರೂ ಬೇರೆ ಏಕೆ ತಂದಿರಿ?” ಎಂಬ ವಿಚಾರವಾಗಿ ಅತ್ತೆ-ಸೊಸೆಯ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಇದರಿಂದ ತೀವ್ರವಾಗಿ ಮನನೊಂದ ಸೋನಂ, ಆವೇಶದಲ್ಲಿ ಮನೆಯಲ್ಲಿದ್ದ ವಿಷ ಸೇವಿಸಿ ಪ್ರಾ*ಣ ಕಳೆದುಕೊಂಡಿದ್ದಾರೆ.

ಕುಟುಂಬದ ಆಂತರಿಕ ಕಲಹವೇ ಈ ಆ*ತ್ಮಹ*ತ್ಯೆಗೆ ಪ್ರಮುಖ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.