S Shorts

Women’s world cup: ಇತಿಹಾಸ ನಿರ್ಮಿಸುವ ತವಕದಲ್ಲಿ ಟೀಂ ಇಂಡಿಯಾ Girls

Women’s world cup: ಇತಿಹಾಸ ನಿರ್ಮಿಸುವ ತವಕದಲ್ಲಿ ಟೀಂ ಇಂಡಿಯಾ Girls
Author: Meghana Gowda
Posted By: Meghana Gowda
Updated: Nov 2, 2025 | 4:54 AM

ಮುಂಬೈ: ಇಡೀ ದೇಶದ ಕಣ್ಣುಗಳು ಈಗ ನವಿ ಮುಂಬೈನತ್ತ. ಹೌದು 2005ರಲ್ಲಿ ಮೊದಲ ಬಾರಿಗೆ ಮಹಿಳಾ ವಿಶ್ವಕಪ್ (Womens world cup )  ಫೈನಲ್‌ಗೆ ತಲುಪಿದ್ದ  ಭಾರತದ ಮಹಿಳಾ ಕ್ರಿಕೆಟ್ ತಂಡವು ಈ ಬಾರಿ ಅದೇ ಕನಸನ್ನು ನಿಜಗೊಳಿಸಲು ಸಜ್ಜಾಗಿದೆ. ಹಲವು ವರ್ಷಗಳಿಂದ ಕಾದು ಕುಳಿತಿರುವ ಕೋಟ್ಯಾಂತರ ಅಭಿಮಾನಿಗಳ ಕನಸಿಗೆ ಇಂದು ಉತ್ತರ ಸಿಗಲಿದೆ.

ಫೈನಲ್ ಹಂತಕ್ಕೆ ತಲುಪಿರುವ ಭಾರತದ ವನಿತೆಯರು ಇದೀಗ ವಿಶ್ವಕಪ್ ಕಿರೀಟದತ್ತ ಕಣ್ಣುಹಾಯಿಸಿದ್ದಾರೆ. ಕೇವಲ ಒಂದೇ ಒಂದು ಗೆಲುವೇ ಇತಿಹಾಸ ಬದಲಾಯಿಸಲು ಸಾಕು. ಚೊಚ್ಚಲ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿ ಭಾರತೀಯ ಆಟಗಾರ್ತಿಯರು ತಮ್ಮ ಸಂಪೂರ್ಣ ಶಕ್ತಿ ಹೂಡಿದ್ದಾರೆ.

ಎಂಟು ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಪುನಃ ಕಾಣಿಸಿಕೊಂಡಿದ್ದು, ಈ ಬಾರಿ ಎದುರಾಳಿಯು ಬಲಿಷ್ಠ ದಕ್ಷಿಣ ಆಫ್ರಿಕಾ ಜೊತೆ ಇಂದು (ನ. 2) ನವಿ ಮುಂಬೈನಲ್ಲಿ ನಡೆಯಲಿರುವ ಈ ರೋಚಕ ಹಣಾಹಣಿಯಲ್ಲಿ ಟೀಂ ಇಂಡಿಯಾ ಮಹಿಳೆಯರು ಕಿರೀಟಕ್ಕಾಗಿ ಸೆಣಸಾಡಲಿದ್ದಾರೆ.