S Shorts

ಕೇಂದ್ರ ಸಚಿವ ವಿ.ಸೋಮಣ್ಣ ವಿರುದ್ಧ ಗಂಭೀರ ಆರೋಪ: ಸರ್ಕಾರಿ ಕಾಲೇಜು ಜಾಗ ಕಬಳಿಸಲು ಸಂಚು, ಲೋಕಾಯುಕ್ತಕ್ಕೆ ದೂರು

ಕೇಂದ್ರ ಸಚಿವ ವಿ.ಸೋಮಣ್ಣ ವಿರುದ್ಧ ಗಂಭೀರ ಆರೋಪ: ಸರ್ಕಾರಿ ಕಾಲೇಜು ಜಾಗ ಕಬಳಿಸಲು ಸಂಚು, ಲೋಕಾಯುಕ್ತಕ್ಕೆ ದೂರು
Author: Sagaradventure
Posted By: Sagaradventure
Updated: Jul 24, 2026 | 12:12 PM

ಕೇಂದ್ರ ಸಚಿವ ವಿ. ಸೋಮಣ್ಣ ವಿರುದ್ಧ ಸರ್ಕಾರಿ ಜಾಗವನ್ನು ಕಬಳಿಸಲು ಸಂಚು ರೂಪಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಕೆಂಗೇರಿ ಬಳಿಯಿರುವ, ಸಚಿವರಿಗೆ ಸೇರಿದೆ ಎನ್ನಲಾದ ‘ಜ್ಞಾನಮಿತ್ರ ಎನ್‌ಪಿಎಸ್ (NPS)’ ಶಾಲೆಗಾಗಿ ಈ ಭೂಮಿಯನ್ನು ಪಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ವಾಸ್ತವದಲ್ಲಿ ಈ ಜಾಗವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿತ್ತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ ನಿರ್ಮಾಣಕ್ಕಾಗಿ 65 ಲಕ್ಷ ರೂ. ಅನುದಾನವೂ ಮಂಜೂರಾಗಿತ್ತು. ಆದರೆ, ಕಟ್ಟಡ ಕಾಮಗಾರಿ ನಡೆಯುತ್ತಿರುವಾಗಲೇ ಅದನ್ನು ಬಲವಂತವಾಗಿ ತೆರವು ಮಾಡಿಸಿ, ಆ ಜಾಗವನ್ನು ತಮ್ಮ ಶಿಕ್ಷಣ ಸಂಸ್ಥೆಗಾಗಿ ಕಬಳಿಸಲು ಯತ್ನಿಸಲಾಗಿದೆ ಎಂಬುದು ಪ್ರಮುಖ ಆರೋಪವಾಗಿದೆ.

ಈ ಅಕ್ರಮದ ಕುರಿತು ರಾಜ್ಯ ಆಮ್ ಆದ್ಮಿ ಪಾರ್ಟಿ (AAP) ಮುಖಂಡ ಶಶಿಧರ್ ಆರಾಧ್ಯ ಅವರು ಕರ್ನಾಟಕ ಲೋಕಾಯುಕ್ತರಿಗೆ ಅಧಿಕೃತವಾಗಿ ದೂರು ಸಲ್ಲಿಸಿದ್ದಾರೆ. ಸರ್ಕಾರಿ ಜಾಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.