S Shorts

Vaibhav Sooryavanshi | ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾದ ವೈಭವ್ ಸೂರ್ಯವಂಶಿ!

Vaibhav Sooryavanshi | ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ: ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾದ ವೈಭವ್ ಸೂರ್ಯವಂಶಿ!
Author: Meghana Gowda
Posted By: Meghana Gowda
Updated: Apr 14, 2026 | 12:53 PM

ಮುಂಬೈ: ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಅಬ್ಬರಿಸುತ್ತಿರುವ ಬಿಹಾರದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ. ಕೇವಲ 15ನೇ ವಯಸ್ಸಿಗೆ ಟೀಮ್ ಇಂಡಿಯಾದ ನೀಲಿ ಜರ್ಸಿ ಧರಿಸುವ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಶಕಗಳ ಕಾಲದ ದಾಖಲೆಯನ್ನು ಮುರಿಯುವ ಸಾಧ್ಯತೆ ದಟ್ಟವಾಗಿದೆ.

🇮🇳 ಐರ್ಲೆಂಡ್ ಪ್ರವಾಸಕ್ಕೆ ಬುಲಾವ್?

ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಭಾರತದ ಬೆಂಚ್ ಬಲವನ್ನು ಪರೀಕ್ಷಿಸಲು ಮುಂದಾಗಿದ್ದು, ಐರ್ಲೆಂಡ್ ವಿರುದ್ಧದ ಮುಂಬರುವ ಸರಣಿಗೆ ವೈಭವ್ ಸೂರ್ಯವಂಶಿಯನ್ನು ಎರಡನೇ ಹಂತದ ತಂಡದಲ್ಲಿ ಸೇರಿಸಿಕೊಳ್ಳಲು ಚಿಂತನೆ ನಡೆಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಕೇವಲ ಐರ್ಲೆಂಡ್ ಮಾತ್ರವಲ್ಲದೆ, ವರ್ಷದ ಕೊನೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆಯಲಿರುವ ಟಿ20 ಸರಣಿಗೂ ಈತನನ್ನು ಪರಿಗಣಿಸುವ ಸಾಧ್ಯತೆಯಿದೆ.

 ಐಪಿಎಲ್‌ನಲ್ಲಿ ಸೂರ್ಯವಂಶಿ ಅಬ್ಬರ:

ಪ್ರಸಕ್ತ ಐಪಿಎಲ್ ಋತುವಿನಲ್ಲಿ ವೈಭವ್ ಆಡಿರುವ ಮೂರು ಪ್ರಮುಖ ಇನ್ನಿಂಗ್ಸ್‌ಗಳು ಆಯ್ಕೆಗಾರರ ಕಣ್ಣು ಕೆಂಪಾಗುವಂತೆ ಮಾಡಿದೆ:

  • Vs RCB: ಕೇವಲ 26 ಎಸೆತಗಳಲ್ಲಿ 78 ರನ್.

  • Vs CSK: 17 ಎಸೆತಗಳಲ್ಲಿ ಬಿರುಸಿನ 52 ರನ್.

  • Vs MI: 14 ಎಸೆತಗಳಲ್ಲಿ ಸ್ಫೋಟಕ 39 ರನ್.

ಈ ಸ್ಫೋಟಕ ಬ್ಯಾಟಿಂಗ್ ಶೈಲಿಯನ್ನು ಕಂಡು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಸೇರಿದಂತೆ ಅನೇಕ ದಿಗ್ಗಜರು ವೈಭವ್‌ನನ್ನು ಭಾರತದ ಅತ್ಯಂತ ಕಿರಿಯ ಚೊಚ್ಚಲ ಆಟಗಾರ ಎಂಬ ದಾಖಲೆಗೆ ಅರ್ಹ ಎಂದು ಶ್ಲಾಘಿಸಿದ್ದಾರೆ.

ಮುರಿಯಲಿರುವ ದಾಖಲೆಗಳು:

  1. ಸಚಿನ್ ತೆಂಡೂಲ್ಕರ್: ಸಚಿನ್ ತಮ್ಮ 16ನೇ ವಯಸ್ಸಿಗೆ (16 ವರ್ಷ 205 ದಿನ) ಭಾರತ ತಂಡವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ಹೊಂದಿದ್ದಾರೆ.

  2. ಶಫಾಲಿ ವರ್ಮಾ: ಮಹಿಳಾ ಕ್ರಿಕೆಟ್‌ನಲ್ಲಿ ಶಫಾಲಿ ತಮ್ಮ 15ನೇ ವಯಸ್ಸಿಗೆ (15 ವರ್ಷ 7 ತಿಂಗಳು 27 ದಿನ) ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಈಗ ವೈಭವ್ ಸೂರ್ಯವಂಶಿ ಕೇವಲ 15ನೇ ವಯಸ್ಸಿಗೆ ಆಯ್ಕೆಯಾದರೆ ಈ ಇಬ್ಬರ ದಾಖಲೆಗಳೂ ಇತಿಹಾಸದ ಪುಟ ಸೇರಲಿವೆ.